Kamal Hassan: ಕಮಲ್ ಹಾಸನ್ ಗೆ ವೇದಿಕೆಯಲ್ಲೇ ಶಿವಣ್ಣ ಚಳಿ ಬಿಡಿಸಬೇಕಿತ್ತು

Krishnaveni K
ಬುಧವಾರ, 28 ಮೇ 2025 (10:46 IST)
Photo Credit: X
ಬೆಂಗಳೂರು: ಥಗ್ಸ್ ಆಫ್ ಲೈಫ್ ಈವೆಂಟ್ ನಲ್ಲಿ ಕನ್ನಡಕ್ಕೆ ಅಪಮಾನ ಮಾಡಿದ ತಮಿಳು ನಟ ಕಮಲ್ ಹಾಸನ್ ಗೆ ವೇದಿಕೆಯಲ್ಲೇ ಇದ್ದ ಶಿವರಾಜ್ ಕುಮಾರ್ ಅಲ್ಲಿಯೇ ಚಳಿ ಬಿಡಿಸಬೇಕಿತ್ತು ಎಂದು ಕನ್ನಡಿಗರು ಅಭಿಪ್ರಾಯ ಪಟ್ಟಿದ್ದಾರೆ.
 

ಥಗ್ಸ್ ಆಫ್ ಲೈಫ್ ಈವೆಂಟ್ ನಲ್ಲಿ ಶಿವರಾಜ್ ಕುಮಾರ್ ಎದುರೇ ಕಮಲ್ ಹಾಸನ್ ಕನ್ನಡ ಭಾಷೆ ಹುಟ್ಟಿದ್ದೇ ತಮಿಳಿನಿಂದ ಎಂದಿದ್ದರು. ಅವರ ಈ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಮಲ್ ಹಾಸನ್ ಕ್ಷಮೆ ಕೇಳಬೇಕು, ಅವರ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹ ಕೇಳಿಬಂದಿದೆ.


ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಕಮಲ್ ಹಾಸನ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಜೊತೆಗೆ ಕಮಲ್ ಹೇಳಿದ್ದನ್ನು ಕೇಳಿಸಿಯೂ ಸುಮ್ಮನೇ ಕೂತಿದ್ದ ಶಿವಣ್ಣನ ಬಗ್ಗೆಯೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಮಲ್ ಹೇಳುವುದನ್ನು ಕೇಳಿಸಿಕೊಂಡು ಶಿವಣ್ಣ ಸುಮ್ಮನೇ ಕೂತಿದ್ದು ಯಾಕೆ? ವೇದಿಕೆಯಲ್ಲೇ ಚಳಿ ಬಿಡಿಸಬೇಕಿತ್ತು. ಇವರಿಗೆ ಬೆಳೆಯಲು ಕನ್ನಡಿಗರು ಬೇಕು, ಕುಡಿಯಲು ನಮ್ಮ ಕಾವೇರಿ ನೀರು ಬೇಕು, ಉದ್ಯೋಗಕ್ಕೆ ನಮ್ಮ ಬೆಂಗಳೂರು ಬೇಕು ಈಗ ಕನ್ನಡವನ್ನೇ ಅಪಮಾನ ಮಾಡುವಷ್ಟು ಸೊಕ್ಕು ತೋರುತ್ತಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಪವಿತ್ರಾ ಗೌಡಗೆ ಮಾಡಿದಂತೇ ಈ ಕಿರುತೆರೆ ನಟಿಗೂ ಮಾಡ್ತಿದ್ದ ಕಾಮುಕ: ಆದ್ರೆ ನಟಿ ಮಾಡಿದ್ದೇನು

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ಮುಂದಿನ ಸುದ್ದಿ
Show comments