Publish Date: Sat, 19 Dec 2020 (10:39 IST)
Updated Date: Sat, 19 Dec 2020 (10:41 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಗೆಳೆಯರೊಂದಿಗೆ ಜಾಲಿ ಮೂಡ್ ನಲ್ಲಿ ಬೈಕ್ ರೈಡಿಂಗ್ ಮಾಡಿದ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ದರ್ಶನ್ ತಮ್ಮ ಕಿರು ಪ್ರವಾಸ ಮುಗಿಸಿ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ.
ದರ್ಶನ್ ತಮ್ಮ ಸ್ನೇಹಿತರ ದೊಡ್ಡ ಗ್ಯಾಂಗ್ ನೊಂದಿಗೆ ಬೈಕ್ ರೈಡಿಂಗ್ ಮೂಲಕ ಕೇರಳ ಪ್ರವಾಸ ಮಾಡಿ ತವರಿಗೆ ಮರಳಿದೆ. ನಿರ್ಮಾಪಕ ಉಮಾಪತಿ ಗೌಡ, ಪ್ರಜ್ವಲ್ ದೇವರಾಜ್ ಸೇರಿದಂತೆ ಸುಮಾರು 10-15 ಜನರ ಸ್ನೇಹಿತರ ಗುಂಪು ಬೈಕ್ ರೈಡಿಂಗ್ ನಡೆಸಿತ್ತು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.