ಬೆಂಗಳೂರು: ಕೊರೋನಾ ಸೋಂಕಿತರಾಗಿದ್ದ ನಟ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ದಂಪತಿ ಖುಷಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.
ಕೊರೋನಾಗೆ ಚಿಕಿತ್ಸೆ ಪಡೆದ ದಂಪತಿ ಈಗ ಮತ್ತೆ ಪರೀಕ್ಷಿಸಿಕೊಂಡಿದ್ದ ನೆಗೆಟಿವ್ ವರದಿ ಬಂದಿರುವುದಾಗಿ ಖುಷಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಮಗಿಬ್ಬರಿಗೂ ಕೊರೋನಾ ನೆಗೆಟಿವ್ ವರದಿ ಬಂದಿದೆ. ನಾವು ಕೊರೋನಾ ಗೆದ್ದಿದ್ದೇವೆ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ.
ನೂತನ ದಂಪತಿ ಹೋಂ ಕ್ವಾರಂಟೈನ್ ನಲ್ಲಿಯೇ ಚಿಕಿತ್ಸೆ ಪಡೆದಿದ್ದರು. ವೈದ್ಯನಾಗಿರುವ ಸಹೋದರನೇ ನಮಗೆ ಚಿಕಿತ್ಸೆ ನೀಡಿದ್ದರು. ಜೊತೆಗೆ ಅಪ್ಪ-ಅಮ್ಮ ಸಹಾಯ ಮಾಡಿದರು. ನಾವೀಗ ಇಬ್ಬರೂ ಹುಷಾರಾಗಿದ್ದೇವೆ ಎಂದು ಮಿಲನಾ ಹೇಳಿಕೊಂಡಿದ್ದಾರೆ.