ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬೇರೆ ಭಾಷೆಗಳಲ್ಲೇ ಬ್ಯುಸಿಯಾಗಿದ್ದರೂ ಐಪಿಎಲ್ ವಿಚಾರ ಬಂದಾಗ ಬೆಂಗಳೂರು ತಂಡವೇ ಫೇವರಿಟ್ ಎಂದಿದ್ದಾರೆ.
ಅಭಿಮಾನಿಗಳೊಂದಿಗೆ ಇನ್ ಸ್ಟಾಗ್ರಾಂ ಲೈವ್ ನಲ್ಲಿ ನಿಮ್ಮ ಫೇವರಿಟ್ ಐಪಿಎಲ್ ಟೀಂ ಯಾವುದು ಎಂದು ಕೇಳಲಾದ ಪ್ರಶ್ನೆಗೆ ರಶ್ಮಿಕಾ ಈ ಸಲ ಕಪ್ ನಮ್ದೇ ಎನ್ನುವ ಮೂಲಕ ಆರ್ ಸಿಬಿ ತಮ್ಮ ಫೇವರಿಟ್ ಟೀಂ ಎಂದಿದ್ದಾರೆ.
ಇನ್ನು, ತಮ್ಮ ಫೇವರಿಟ್ ಸ್ಥಳವೆಂದರೆ ತವರೂರು ಕೊಡಗು ಎಂದಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಫೇವರಿಟ್ ಕನ್ನಡ ಸಿನಿಮಾ ಕಿರಿಕ್ ಪಾರ್ಟಿ. ಅದು ಯಾವತ್ತಿಗೂ ನನಗೆ ಸ್ಪೆಷಲ್ ಸಿನಿಮಾ ಎಂದು ಉತ್ತರ ನೀಡಿದ್ದಾರೆ.