Publish Date: Wed, 28 Apr 2021 (09:59 IST)
Updated Date: Wed, 28 Apr 2021 (10:04 IST)
ಬೆಂಗಳೂರು: ಕೊರೋನಾ ಸೋಂಕಿತರಾಗಿದ್ದ ನಟ ಕೋಮಲ್ ಕುಮಾರ್ ಗೆ ರಹಸ್ಯವಾಗಿ ಚಿಕಿತ್ಸೆ ಕೊಡಿಸಿದ ಬಗ್ಗೆ ಸಹೋದರ, ನಟ ಜಗ್ಗೇಶ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಳೆದ 14 ದಿನಗಳಿಂದ ನಾನು ಅನುಭವಿಸಿದ ನರಕಯಾತನೆ ರಾಯರಿಗೆ ಮಾತ್ರ ಗೊತ್ತು. ಕೊನೆಗೆ ರಾಯರೇ ಅವನನ್ನು ಬದುಕಿಸಿದರು ಎಂದು ಜಗ್ಗೇಶ್ ನೋವು ಹಂಚಿಕೊಂಡಿದ್ದಾರೆ.
ಕೋಮಲ್ 2 ವಾರದ ಹಿಂದೆ ಆಸ್ಪತ್ರೆಗೆ ಸೇರಿಸುವಾಗ ಎಲ್ಲರೂ ಕಂಗಾಲಾದರು.ನಾನು ಅವನಿಗೆ ರಾಯರ ಮಂತ್ರಾಕ್ಷತೆ, ರಾಯರ ಬೃಂದಾವನ ತೊಳೆಯುವ ಪವಿತ್ರ ಜಲ ಕಳುಹಿಸಿಕೊಟ್ಟೆ. ಆತ ಆಸ್ಪತ್ರೆಗೆ ದಾಖಲಾಗುವ 80 ಕ್ಕೆ ಇಳಿದಿದ್ದ ಆಕ್ಸಿಜನ್ ಈಗ 98 ಕ್ಕೆ ಬಂದು ನಿಂತಿದೆ. ಶೇ.80 ರಷ್ಟು ಶ್ವಾಸಕೋಶಕ್ಕೆ ಹೊಕ್ಕಿದ್ದ ಕೊರೋನಾ ಈಗ ಇಳಿದಿದೆ. ಸದ್ಯಕ್ಕೆ ಕೋಮಲ್ ಸೇಫ್ ಆಗಿದ್ದಾನೆ ಎಂದು ಜಗ್ಗೇಶ್ ಹೇಳಿದ್ದಾರೆ.