Select Your Language

Notifications

webdunia
webdunia
webdunia
webdunia

ರಾಮು ಅಂತ್ಯಕ್ರಿಯೆಯಲ್ಲಿ ಮಾಲಾಶ್ರೀ, ಕುಟುಂಬಸ್ಥರು ಭಾಗಿ

ರಾಮು ಅಂತ್ಯಕ್ರಿಯೆಯಲ್ಲಿ ಮಾಲಾಶ್ರೀ, ಕುಟುಂಬಸ್ಥರು ಭಾಗಿ
ಬೆಂಗಳೂರು , ಮಂಗಳವಾರ, 27 ಏಪ್ರಿಲ್ 2021 (10:57 IST)
ಬೆಂಗಳೂರು: ಕೊರೋನಾದಿಂದಾಗಿ ಸಾವನ್ನಪ್ಪಿರುವ ಖ್ಯಾತ ನಿರ್ಮಾಪಕ ರಾಮು ಅಂತ್ಯಕ್ರಿಯೆಯಲ್ಲಿ ಪತ್ನಿ ಮಾಲಾಶ್ರೀ ಸೇರಿದಂತೆ ಕುಟುಂಬದ ಕೆಲವೇ ಮಂದಿ ಭಾಗಿಯಾಗಲಿದ್ದಾರೆ.


ಈಗಾಗಲೇ ರಾಮು ತವರೂರು ಕೊಡಿಗೇನಹಳ್ಳಿಗೆ ಮೃತದೇಹ ರವಾನೆಯಾಗಿದೆ. ಅಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ. ಆದರೆ ಕೊರೋನಾ ಕಾರಣದಿಂದ ಅಭಿಮಾನಿಗಳಿಗೆ, ಮಾಧ್ಯಮಗಳಿಗೆ ಅವಕಾಶವಿಲ್ಲ.

ಪತ್ನಿ ಮಾಲಾಶ್ರೀ, ಮಕ್ಕಳು ಸೇರಿದಂತೆ ಕೆಲವೇ ಮಂದಿ ಕುಟುಂಬ ಸದಸ್ಯರು ಮಾತ್ರ ಅಂತ್ಯಕ್ರಿಯೆ ಸಂದರ್ಭ ಉಪಸ್ಥಿತರಿರಲಿದ್ದಾರೆ. ರಾಮು ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಟಿ ಮಾಲಾಶ್ರೀಗೂ ಸಮಾಧಾನ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಯೇ ನನ್ನ ಫೇವರಿಟ್ ಐಪಿಎಲ್ ಟೀಂ ಎಂದ ರಶ್ಮಿಕಾ ಮಂದಣ್ಣ