Select Your Language

Notifications

webdunia
webdunia
webdunia
webdunia

ಮಿಲ್ಕಿ ಬ್ಯೂಟಿ ತಮನ್ನಾಗೆ ಮದುವೆ ಆಹ್ವಾನ ನೀಡಿದ ಕೃಷ್ಣ-ಮಿಲನಾ ನಾಗರಾಜ್

ಮಿಲ್ಕಿ ಬ್ಯೂಟಿ ತಮನ್ನಾಗೆ ಮದುವೆ ಆಹ್ವಾನ ನೀಡಿದ ಕೃಷ್ಣ-ಮಿಲನಾ ನಾಗರಾಜ್
ಬೆಂಗಳೂರು , ಭಾನುವಾರ, 17 ಜನವರಿ 2021 (09:33 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಆತ್ಮೀಯರಿಗೆ ಹಂಚುವುದರಲ್ಲಿ ಬ್ಯುಸಿಯಾಗಿದ್ದಾರೆ.


ಇದೀಗ ಈ ಮುದ್ದಾದ ಜೋಡಿ ಮಿಲ್ಕಿ ಬ್ಯೂಟಿ ತಮನ್ನಾಗೆ ಆಹ್ವಾನ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ. ಈ ಜೋಡಿ ಜೊತೆಯಾಗಿ ಅಭಿನಯಿಸಿದ ಲವ್ ಮಾಕ್ಟೇಲ್ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದೆ. ಈ ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿದ್ದಾರೆ. ಹೀಗಾಗಿ ಚಿತ್ರೀಕರಣವಾಗುತ್ತಿರುವ ಸೆಟ್ ಗೆ ಭೇಟಿ ಕೊಟ್ಟ ಡಾರ್ಲಿಂಗ್ ಕೃಷ್ಣ-ಮಿಲನಾ ತಮನ್ನಾ ಜೊತೆಗೆ ಇಡೀ ಚಿತ್ರತಂಡಕ್ಕೆ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಅಜೇಯ್ ರಾವ್ ಪಾಲಿಗೆ ‘ಕೃಷ್ಣ’ನೇ ಲಕ್ಕಿ