Select Your Language

Notifications

webdunia
webdunia
webdunia
webdunia

ವೀಕೆಂಡ್ ಮಸ್ತಿಗೆ ಮೋಹಕ ಹಾಡುಗಳ ಸಾಥ್!

ವೀಕೆಂಡ್ ಮಸ್ತಿಗೆ ಮೋಹಕ ಹಾಡುಗಳ ಸಾಥ್!
ಬೆಂಗಳೂರು , ಬುಧವಾರ, 22 ಮೇ 2019 (13:46 IST)
ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಡಿಯಲ್ಲಿ ಡಿ ಮಂಜುನಾಥ್ ಅವರು ನಿರ್ದೇಶನ ಮಾಡಿರುವ ಚಿತ್ರ ವೀಕೆಂಡ್. ಈ ವಾರ ಬಿಡುಗಡೆಯಾಗುತ್ತಿರೋ ಈ ಸಿನಿಮಾವೀಗ ಭಾರೀ ಕ್ರೇಜ್ ಸೃಷ್ಟಿಸಿರೋದರ ಹಿಂದೆ ಅನೇಕ ವಿಚಾರಗಳಿದ್ದಾವೆ. ಅವುಗಳಲ್ಲಿ ಈ ಚಿತ್ರದ ಚೆಂದದ ಹಾಡುಗಳೂ ಸೇರಿಕೊಂಡಿವೆ.
ಶೃಂಗೇರಿ ಸುರೇಶ್ ಪ್ರತಿಯೊಂದು ವಿಚಾರದಲ್ಲಿಯೂ ವಿಶೇಷವಾಗಿರಬೇಕೆಂಬ ಮಹತ್ವಾಕಾಂಕ್ಷೆಯಿಂದಲೇ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದೇ ರೀತಿ ಹಾಡುಗಳನ್ನೂ ಕೂಡಾ ರೂಪಿಸಿದ್ದಾರೆ. ಈ ಚಿತ್ರದಲ್ಲಿರೋದು ಮೂರೇ ಮೂರು ಹಾಡುಗಳಷ್ಟೇ. ಆ ಮೂರೂ ಹಾಡುಗಳಿಗೆ ಶ್ರೀಲಂಕಾ ಮೂಲದ ಬೆಂಗಳೂರು ವಾಸಿ ಮನೋಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವೆಲ್ಲವೂ ಟ್ರೆಂಡಿಂಗ್ನಲ್ಲಿವೆ. ಅದರಲ್ಲಿಯೂ ಪಾರ್ಟಿ ಸಾಂಗ್ ಅಂತೂ ಎಲ್ಲರ ಮನ ಸೆಳೆದುಕೊಂಡಿದೆ.
webdunia
ಹೀಗೆ ಹಾಡುಗಳಂತೆಯೇ ಟ್ರೈಲರ್ ಕೂಡಾ ಮೆಚ್ಚುಗೆಗೆ ಪಾತ್ರವಾಗಿದೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿರೋ ಈ ಚಿತ್ರವನ್ನು ಡಿ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಶಶಿಧರ್ ಛಾಯಾಗ್ರಹಣ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ, ಮನೋಜ್ ಸಂಗೀತ ಹಾಗೂ ಅನಂತ್ ನಾಗ್, ಮಂಜುನಾಥ್, ನೀನಾಸಂ ರಘು, ಬ್ಯಾಂಕ್ ಸತೀಶ್, ನೀತು ಬಾಲಾ, ವೀಣಾ ಜಯಶಂಕರ್, ಸಂಜಯ್ ನಾಗೇಶ್, ಮಂಜುನಾಥ ಶಾಸ್ತ್ರಿ, ಗೋಪಿನಾಥ್ ಭಟ್, ನಾಗಭೂಷಣ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಕೆಂಡ್: ಅಚ್ಚರಿಗೊಳಿಸಲಿದೆ ಅನಂತ್ ನಾಗ್ ಪಾತ್ರ!