ರಾಕಿಂಗ್ ಸ್ಟಾರ್ ಯಶ್ ಮನೆ ಬಾಗಿಲಿಗೆ ಬಂದ ಕ್ರೇಜಿಸ್ಟಾರ್ ದಂಪತಿ

ಗುರುವಾರ, 16 ಮೇ 2019 (08:48 IST)
ಬೆಂಗಳೂರು: ಮಗಳ ಮದುವೆ ಕಾರ್ಯದಲ್ಲಿ ಬ್ಯುಸಿಯಾಗಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಇದೀಗ ಚಿತ್ರರಂಗದ ತಮ್ಮ ಆಪ್ತರ ಮನೆಗೆ ತೆರಳಿ ಆಹ್ವಾನ ಪತ್ರಿಕೆ ಹಂಚುತ್ತಿದ್ದಾರೆ.


ಇತ್ತೀಚೆಗಷ್ಟೇ ಗೋಲ್ಡನ್ ಸ್ಟಾರ್ ಗಣೇಶ್, ಸುಧಾರಾಣಿ, ಜಗ್ಗೇಶ್ ಸೇರಿದಂತೆ ತಮ್ಮ ಆಪ್ತರ ಮನೆಗೆ ಖುದ್ದಾಗಿ ಭೇಟಿ ನೀಡಿ ಮಗಳು ಗೀತಾಂಜಲಿ ಮದುವೆಗೆ ಆಹ್ವಾನಿಸಿದ್ದ ರವಿಚಂದ್ರನ್ ಇದೀಗ ರಾಕಿಂಗ್ ಸ್ಟಾರ್ ಯಶ್ ಮನೆಗೆ ಭೇಟಿ ನೀಡಿ ಆಹ್ವಾನ ಪತ್ರಿಕೆ ನೀಡಿದ್ದಾರೆ.

ರವಿಚಂದ್ರನ್ ಕ್ರಿಯೇಟಿವಿಟಿ ಆಹ್ವಾನ ಪತ್ರಿಕೆಯಲ್ಲೂ ನೋಡಿ ರಾಕಿಂಗ್ ಸ್ಟಾರ್ ಯಶ್ ಖುಷಿಯಾಗಿದ್ದಾರೆ. ಮೇ 28 ಮತ್ತು 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರವಿಚಂದ್ರನ್ ಪುತ್ರಿಯ ವಿವಾಹ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಡಿ ಬಾಸ್ ದರ್ಶನ್ ತೆಗೆದ ಫೋಟೋಗೆ ಹಾಸ್ಯ ನಟ ಚಿಕ್ಕಣ್ಣ ಕೊಟ್ಟ ಬೆಲೆಯೆಷ್ಟು ಗೊತ್ತೇ?!