Publish Date: Sun, 05 Mar 2023 (16:13 IST)
Updated Date: Sun, 05 Mar 2023 (16:16 IST)
ಕನ್ನಡದಲ್ಲಿ ಕೆಜಿಎಫ್ ನಂತರ ಅತಿದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗಿರುವ ಪ್ಯಾನ್ ಇಂಡಿಯಾ ಚಿತ್ರ ಕಬ್ಜ ಟ್ರೈಲರ್ ಇಂದು ಸಂಜೆ 5.02ಕ್ಕೆ ರಿಲೀಸ್ ಆಗಲಿದೆ. ಯೂಟ್ಯೂಬ್ನಲ್ಲಿ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕಬ್ಜ ಚಿತ್ರವನ್ನು ಆರ್.,ಚಂದ್ರು ನಿರ್ದೇಶಿಸುತ್ತಿದ್ದು, ಮುಖ್ಯ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿದ್ದಾರೆ.. ಕಬ್ಜ ಸಿನಿಮಾದಲ್ಲಿ ಸಾಂಡಲ್ವುಡ್ ದಿಗ್ಗಜರು ನಟಿಸಿದ್ದಾರೆ.. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಕೂಡ ಚಿತ್ರದಲ್ಲಿದ್ದಾರೆ. ಈಗಾಗಲೇ ಕಬ್ಜ ಸಿನಿಮಾದ ಟೀಸರ್, ಹಾಡುಗಳು ಚಂದನವನದಲ್ಲಿ ಧೂಳೆಬ್ಬಿಸಿವೆ. ಇಂದು ಚಿತ್ರದ ಟ್ರೈಲರ್ ರಿಲೀಸ್ ಆಗಲಿದ್ದು ಸಿನಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಬ್ಜ ಸಿನಿಮಾ ಅಪ್ಪು ಹುಟ್ಟಿದ ದಿನ ಮಾರ್ಚ್ 17 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ.