Publish Date: Mon, 26 Apr 2021 (16:29 IST)
Updated Date: Mon, 26 Apr 2021 (16:31 IST)
ಹೈದರಾಬಾದ್ : ಜಗನ್ಮೋಹಿನಿ ಮತ್ತು ಗಜಾ ಡೊಂಗಾ ಚಿತ್ರಗಳಲ್ಲಿ ನಟಿಸಿದ ಹಾಸ್ಯ ನಟ ಪೊಟ್ಟಿ ವೀರಯ್ಯ ಅವರು ಹೈದರಾಬಾದ್ ನಲ್ಲಿ ನಿಧನರಾಗಿದ್ದಾರೆ.
ಇವರಿಗೆ 74 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಹೈದರಾಬಾದ್ ನಲ್ಲಿ ನಿಧನರಾಗಿದ್ದಾರೆ. ಹುಟ್ಟಿದಾಗಿನಿಂದ ಕುಬ್ಜನಾಗಿದ್ದ ಪೊಟ್ಟಿ ವೀರಯ್ಯ ಅವರು 1967ರಲ್ಲಿ ಬಿಡುಗಡೆಯಾದ ವಿಠಲಾಚಾರ್ಯರ ಅಗ್ನಿ ಡೋರಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಇವರು ಹಿಂದಿ ತಮಿಳು, ತೆಲುಗು, ಕನ್ನಡ, ಮತ್ತು ಮಲಯಾಳಂ ಮತ್ತು ಒರಿಯಾ ಸೇರಿದಂತೆ ಒಟ್ಟು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ ಜನಪ್ರಿಯ ಚಿತ್ರಗಳೆಂದರೆ ಯುಗಂದರ್, ಗೋಲಾ ನಾಗಮ್ಮ, ಅತ್ತಗರಿ ಪೆಟ್ಟಾನಂ ಜಗಾ ಡೊಂಗಾ ಮುಂತಾದವು.