Select Your Language

Notifications

webdunia
webdunia
webdunia
webdunia

ಮತ್ತೆ ಒಂದಾಗಲಿದೆಯಂತೆ ನಿರ್ದೇಶಕ ಸುಕುಮಾರ್ ಮತ್ತು ಸ್ಟಾರ್ ನಟ ರಾಮ್ ಚರಣ್ ಜೋಡಿ

ಮತ್ತೆ ಒಂದಾಗಲಿದೆಯಂತೆ ನಿರ್ದೇಶಕ ಸುಕುಮಾರ್ ಮತ್ತು ಸ್ಟಾರ್ ನಟ ರಾಮ್ ಚರಣ್ ಜೋಡಿ
ಹೈದರಾಬಾದ್ , ಸೋಮವಾರ, 26 ಏಪ್ರಿಲ್ 2021 (08:54 IST)
ಹೈದರಾಬಾದ್ : ರಂಗಸ್ಥಲಂ ಚಿತ್ರದ ಬಳಿಕ ನಿರ್ದೇಶಕ ಸುಕುಮಾರ್ ಮತ್ತು ಸ್ಟಾರ್ ನಟ ರಾಮ್ ಚರಣ್ ಅವರು ಹಳ್ಳಿ ಆಧಾರಿತ ಚಿತ್ರವನ್ನು ಮಾಡಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇತ್ತೀಚಿನ ಮಾಹಿತಿ ಪ್ರಕಾರ ಈ ಚಿತ್ರ ರಂಗಸ್ಥಲಂ ಚಿತ್ರದ ಮುಂದುವರಿದ ಭಾಗ ಎನ್ನಲಾಗಿದೆ. ರಂಗಸ್ಥಲಂ ಚಿತ್ರದಲ್ಲಿ ಸಮಂತಾ ಅಕ್ಕಿನೇನಿ ರಾಮ್ ಚರಣ್ ಗೆ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರ 2018ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ.

ಇದೀಗ ನಿರ್ದೇಶಕ ಸುಕುಮಾರ್ ಮತ್ತು ಸ್ಟಾರ್ ನಟ ರಾಮ್ ಚರಣ್ ಎರಡನೇ ಬಾರಿಗೆ ಒಂದಾಗಲಿದ್ದು, ಇದು ರಂಗಸ್ಥಲಂ ಚಿತ್ರದ ಮುಂದುವರಿದ ಭಾಗ ಎಂಬ ವದಂತಿ ಕೇಳಿಬಂದಿದೆ. ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

‘ವಕೀಲ್ ಸಾಬ್’ ಚಿತ್ರವನ್ನು ಹಿಂದಿಕ್ಕಿದ ಜತಿ ರತ್ನಲು ಚಿತ್ರ