Select Your Language

Notifications

webdunia
webdunia
webdunia
webdunia

‘ವಕೀಲ್ ಸಾಬ್’ ಚಿತ್ರವನ್ನು ಹಿಂದಿಕ್ಕಿದ ಜತಿ ರತ್ನಲು ಚಿತ್ರ

‘ವಕೀಲ್ ಸಾಬ್’ ಚಿತ್ರವನ್ನು ಹಿಂದಿಕ್ಕಿದ ಜತಿ ರತ್ನಲು ಚಿತ್ರ
ಹೈದರಾಬಾದ್ , ಸೋಮವಾರ, 26 ಏಪ್ರಿಲ್ 2021 (08:51 IST)
ಹೈದರಾಬಾದ್ : 3 ವರ್ಷಗಳ ಬಳಿಕ ಟಾಲಿವುಡ್ ಗೆ ಮರುಪ್ರವೇಶ ಮಾಡಿದ ಪವನ್ ಕಲ್ಯಾಣ್ ವೇಣು ಶ್ರೀರಾಮ್ ನಿರ್ದೇಶನದ ವಕೀಲ್ ಸಾಬ್ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ಏಪ್ರಿಲ್ 9ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಆದರೆ ಇಂತಹ ಸ್ಟಾರ್ ನಟನ ಚಿತ್ರವನ್ನು ಕಡಿಮೆ ಬಜೆಟ್ ನ ‘ಜತಿ ರತ್ನಲು’ ಚಿತ್ರ ಸೋಲಿಸಿದೆ ಎನ್ನಲಾಗಿದೆ.

ಹಿಂದಿ ಪಿಂಕ್ ಚಿತ್ರದ ರಿಮೇಕ್ ಆದ ವಕೀಲ್ ಸಾಬ್ ಚಿತ್ರ ಯುಎಸ್ ಎ ನಲ್ಲಿ ಸುಮಾರು 750 ಕೆ ಡಾಲರ್ ಸಂಗ್ರಹಿಸಿದೆ. ಆಸ್ಟ್ರೇಲಿಯಾದಲ್ಲಿ ಈ ಚಿತ್ರ 295ಕೆ ಡಾಲರ್ ಗಳನ್ನು ಸಂಗ್ರಹಿಸಿದೆ.

ಆದರೆ ಜತಿ ರತ್ನಲು ಚಿತ್ರ ಯುಎಸ್ ಎ ನಲ್ಲಿ ಸುಮಾರು 1 ಮಿಲಿಯನ್  ಡಾಲರ್ ಸಂಗ್ರಹಿಸಿದೆ. ಆಸ್ಟ್ರೇಲಿಯಾದಲ್ಲಿ ಈ ಚಿತ್ರ 315ಕೆ. ಡಾಲರ್ ಗಳಿಸಿದೆ. ಹಾಗಾಗಿ ವಿದೇಶದಲ್ಲಿ ವಕೀಲ್ ಸಾಬ್ ಚಿತ್ರಕ್ಕಿಂತ ಜತಿ ರತ್ನಲು ಚಿತ್ರ ಉತ್ತಮ ಪ್ರದರ್ಶನ ನೀಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರಟಾಲ ಶಿವನ ಚಿತ್ರವನ್ನು ನಿರಾಕರಿಸಿದ ಸ್ಟಾರ್ ನಟ