ಚಿರಂಜೀವಿ ಸರ್ಜಾ ಸೋಷಿಯಲ್ ಮೀಡಿಯಾ ಖಾತೆಯೇ ಈಗ ಸ್ಮಾರಕ!

ಬುಧವಾರ, 8 ಜುಲೈ 2020 (10:20 IST)
ಬೆಂಗಳೂರು: ಸ್ಯಾಂಡಲ್ ವುಡ್ ಗೆ ತೀವ್ರ ಆಘಾತ ನೀಡಿದ ಸುದ್ದಿಯೆಂದರೆ ಚಿರಂಜೀವಿ ಸರ್ಜಾ ಅಕಾಲಿಕ ಮರಣ. ಆ ಆಘಾತದಿಂದ ಅವರ ಕುಟುಂಬ ಇನ್ನೂ ಹೊರಬಂದಿಲ್ಲ.


ಹಾಗಿದ್ದರೂ ಚಿರು ಸರ್ಜಾ ಇನ್ ಸ್ಟಾಗ್ರಾಂ ಖಾತೆಯನ್ನು ಕುಟುಂಬವರ್ಗ ಜೀವಂತವಿಟ್ಟಿದೆ. ಅದರಲ್ಲೂ ಇತ್ತೀಚೆಗೆ ಪತ್ನಿ ಮೇಘನಾ ರಾಜ್ ಚಿರು ಖಾತೆಯಲ್ಲಿ ಭಾವುಕ ಸಂದೇಶ ಪೋಸ್ಟ್ ಮಾಡಿ ಅವರ ಮರಣದ ನಂತರವೂ ಇನ್ ಸ್ಟಾಗ್ರಾಂ ಖಾತೆ ಜೀವಂತವಾಗಿರುವಂತೆ ನೋಡಿಕೊಂಡಿದ್ದಾರೆ.

ಇದೀಗ ಇನ್ ಸ್ಟಾಗ್ರಾಂ ಖಾತೆಯ ಪ್ರೊಫೈಲ್ ನಲ್ಲಿ ಚಿರಂಜೀವಿ ಸ್ಮರಣೆಯಲ್ಲಿ ಎಂಬ ಟ್ಯಾಗ್ ಲೈನ್ ಸೇರ್ಪಡೆಯಾಗಿದೆ. ಅಂದರೆ ಚಿರು ಖಾತೆ ಅವರ ಮರಣದ ನಂತರವೂ ಜೀವಂತವಾಗಿರಲಿದ್ದು, ಒಂದು ರೀತಿಯಲ್ಲಿ ಅವರ ನೆನಪಿನಲ್ಲಿ ಆಕ್ಟಿವ್ ಆಗಿರಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್ ಮಾಡುತ್ತಿದ್ದ ಕೆಲಸ ನೋಡಿ ದಂಗಾದ ಕಿರಿಕ್ ಕೀರ್ತಿ!