Normal
0
false
false
false
EN-US
X-NONE
X-NONE
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಸುಶ್ಮಿತಾ ವೆಬ್ ಸಿರೀಸ್ ಒಂದನ್ನು ಆರಂಭಿಸಿದ್ದು, ಆದರೆ ಇದು ಈಗ ಅರ್ಧದಲ್ಲೇ ನಿಂತುಹೋಗಿದೆ.
ಚಿರಂಜೀವಿ ಪುತ್ರಿ ಸುಶ್ಮಿತಾ ಗೋಲ್ಡ್ ಬಾಕ್ಸ್ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ವೆಬ್ ಸಿರೀಸ್ ಆರಂಭಿಸಿದ್ದು, ಇದರಲ್ಲಿ ಓಯ್ ಕ್ಯಾತಿಯ ಆನಂದ್ ರಂಗ, ಪ್ರಕಾಶ್ ರಾಜ್ ನಟಿಸುತ್ತಿದ್ದಾರೆ. ಆದರೆ ಇದರ ಶೂಟಿಂಗ್ ಅರ್ಧದಲ್ಲೇ ನಿಂತುಹೋಗಿದೆ. ಇದಕ್ಕೆ ಕಾರಣ ಈ ತಂಡದ ಸದಸ್ಯರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನಲೆಯಲ್ಲಿ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಎಲ್ಲರೂ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಕೊರೊನಾ ವೈರಸ್ ನಿಂದಾಗಿ ಪ್ರಾರಂಭದಲ್ಲೆ ವೆಬ್ ಸಿರೀಸ್ ಗೆ ಈ ರೀತಿ ತೊಂದರೆಯಾಗಿದ್ದು ಸುಶ್ಮಿತಾ ಅವರಿಗೆ ಬೇಸರವನ್ನುಂಟು ಮಾಡಿದ್ದಾರೆ.