Select Your Language

Notifications

webdunia
webdunia
webdunia
webdunia

ಚಂದನ್ ಆಚಾರ್ ಹೊಸ ಸಿನಿಮಾ ತುಂಬಾ ಕಿಚ್ಚ ಸುದೀಪ್! ಕಿಚ್ಚನಿಗೆ ಖುಷಿಯೋ ಖುಷಿ

ಚಂದನ್ ಆಚಾರ್ ಹೊಸ ಸಿನಿಮಾ ತುಂಬಾ ಕಿಚ್ಚ ಸುದೀಪ್! ಕಿಚ್ಚನಿಗೆ ಖುಷಿಯೋ ಖುಷಿ
ಬೆಂಗಳೂರು , ಬುಧವಾರ, 4 ಮಾರ್ಚ್ 2020 (09:58 IST)
ಬೆಂಗಳೂರು: ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಚಂದನ್ ಆಚಾರ್ ಹೊಸ ಸಿನಿಮಾ ಮೂಲಕ ಜನರ ಎದುರು ಬರುತ್ತಿದ್ದಾರೆ. ಅದುವೇ ‘ಮಂಗಳವಾರ ರಜಾ ದಿನ’ ಎಂಬ ಎಂಟರ್ ಟೈನ್ ಮೆಂಟ್ ಸಿನಿಮಾ.


ಈ ಸಿನಿಮಾದಲ್ಲಿ ಚಂದನ್ ನಾಯಕರಾಗಿದ್ದು, ಜಹಂಗೀರ್, ರಜನೀಕಾಂತ್, ಗೋಪಾಲಕೃಷ್ಣ ದೇಶಪಾಂಡೆ ಮತ್ತಿತರರು ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ನುದ್ದಕ್ಕೂ ಕಿಚ್ಚ ಸುದೀಪ್ ಬಂದು ಹೋಗುತ್ತಾರೆ.

ಸಲೂನ್ ಇಟ್ಟುಕೊಂಡಿರುವ ನಾಯಕನಿಗೆ ಒಂದಲ್ಲಾ ಒಂದು ದಿನ ಕಿಚ್ಚ ಸುದೀಪ್ ಗೆ ಹೇರ್ ಸ್ಟೈಲ್ ಮಾಡಬೇಕೆಂಬ ಆಸೆ ಎಂಬುದು ಈ ಟ್ರೈಲರ್ ನಲ್ಲಿ ಗೊತ್ತಾಗುತ್ತದೆ. ಟ್ರೈಲರ್ ನೋಡಿದ ಕಿಚ್ಚ ಸುದೀಪ್ ಭಾರೀ ಇಷ್ಟಪಟ್ಟಿದ್ದು, ನನ್ನನ್ನೂ ಈ ಸಿನಿಮಾದ ಭಾಗವಾಗಿಸಿದ್ದಕ್ಕೆ ಧನ್ಯವಾದ ಎಂದಿದ್ದಾರೆ. ಈ ಚಿತ್ರ ಈ ತಿಂಗಳ ಅಂತ್ಯಕ್ಕೆ ತೆರೆ ಕಾಣುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಕನ್ನಡ ಧಾರವಾಹಿಗೆ ನಟ-ನಟಿಯರು ಬೇಕಾಗಿದ್ದಾರೆ