Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಹೆಸರು ಬದಲು! ಈಗ ವಿಕ್ರಾಂತ್ ರೋಣ!

ಕಿಚ್ಚ ಸುದೀಪ್ ಹೆಸರು ಬದಲು! ಈಗ ವಿಕ್ರಾಂತ್ ರೋಣ!
ಬೆಂಗಳೂರು , ಮಂಗಳವಾರ, 3 ಮಾರ್ಚ್ 2020 (12:18 IST)
ಬೆಂಗಳೂರು: ಕಿಚ್ಚ ಸುದೀಪ್ ಈಗ ವಿಕ್ರಾಂತ್ ರೋಣ ಆಗಿದ್ದಾರೆ! ಆದರೆ ರಿಯಲ್ ಲೈಫ್ ನಲ್ಲಿ ಅಲ್ಲ. ಫ್ಯಾಂಟಮ್ ಸಿನಿಮಾದಲ್ಲಿ ಕಿಚ್ಚನ ಪಾತ್ರದ ಹೆಸರು ವಿಕ್ರಾಂತ್ ರೋಣ.


ಈಗಾಗಲೇ ಫ್ಯಾಂಟಮ್ ಸಿನಿಮಾ ಶೂಟಿಂಗ್ ಶುರುವಾಗಿ ಎರಡನೇ ದಿನವಾಗಿದೆ. ನಿನ್ನೆಯಿಂದ ಭರದಿಂದ ಶೂಟಿಂಗ್ ಮಾಡುತ್ತಿರುವ ಅನೂಪ್ ಭಂಡಾರಿ ಮತ್ತು ತಂಡ ಕಿಚ್ಚನ ಮೊದಲ ಶಾಟ್ ಬಗ್ಗೆ ಖುಷಿಯಿಂದಲೇ ಹೇಳಿಕೊಂಡಿದ್ದಾರೆ. ಮೊದಲ ಶೂಟ್ ನಲ್ಲಿ ಕಿಚ್ಚ ಅದ್ಭುತವಾಗಿ ಪರ್ಫಾರ್ಮ್ ಮಾಡಿರುವುದನ್ನು ಅನೂಪ್ ಹೇಳಿಕೊಂಡಿದ್ದರು. ಜತೆಗೆ ಕಿಚ್ಚ ಗನ್ ಹಿಡಿದು ನಿಂತಿರುವ ಫೋಟೋವನ್ನು ಬಹಿರಂಗಪಡಿಸಿದ್ದರು.

ಇಂದು ಕಿಚ್ಚ ಸುದೀಪ್ ತಮ್ಮ ಪಾತ್ರದ ಹೆಸರು ರಿವೀಲ್ ಮಾಡಿದ್ದಾರೆ.  ಈ ಪಾತ್ರದಲ್ಲಿ ಕಿಚ್ಚ ಸ್ಟೈಲಿಶ್ ಆಗಿ ಕಾಣಿಸಿದ್ದಾರೆ. ಅದಕ್ಕೆಂದೇ ವಿಶೇಷ ಹೇರ್ ಸ್ಟೈಲ್ ಕೂಡಾ ಮಾಡಿಸಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಾಲಯದಲ್ಲಿ ಭಕ್ತಿಪರವಶರಾಗಿ ಅಪ್ಪಾಜಿ ಹಾಡು ಹಾಡಿದ ಪುನೀತ್ ರಾಜಕುಮಾರ್