Publish Date: Tue, 03 Mar 2020 (11:21 IST)
Updated Date: Tue, 03 Mar 2020 (11:26 IST)
ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ರಾಘವೇಂದ್ರ ಸ್ವಾಮಿಗಳ ಭಕ್ತರು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಅಣ್ಣಾವ್ರು ಹಾಡಿದ ವಾರ ಬಂತಮ್ಮಾ ಹಾಡು ಇಂದಿಗೂ ಜನ ಜನಿತ. ಅದೇ ಹಾಡನ್ನು ಇದೀಗ ಅವರ ಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿದ್ದಾರೆ.
ಮಂತ್ರಾಲಯಕ್ಕೆ ಪುನೀತ್ ಆಗಾಗ ಭೇಟಿ ನೀಡುತ್ತಿರುತ್ತಾರೆ. ಅದರಂತೆ ಇಂದು ರಾಯರ ಸನ್ನಿಧಾನಕ್ಕೆ ತೆರಳಿ ಸನ್ಮಾನ ಸ್ವೀಕರಿಸಿದ ಬಳಿಕ ಪುನೀತ್ ಭಕ್ತಿಯಿಂದ ವಾರ ಬಂತಮ್ಮಾ ಹಾಡು ಹಾಡಿದ್ದಾರೆ.
ಪೂರ್ತಿ ಹಾಡು ಹಾಡದೇ ಇದ್ದರೂ ತಮಗೆ ಗೊತ್ತಿದ್ದಷ್ಟು ಭಕ್ತಿಯಿಂದ ಪುನೀತ್ ಹಾಡಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.