Publish Date: Thu, 11 Dec 2025 (17:07 IST)
Updated Date: Thu, 11 Dec 2025 (17:08 IST)
ಬೆಂಗಳೂರು: ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ರಾಜ್ಯಾದಾದ್ಯಂತ ಅದ್ಧೂರಿಯಾಗಿ ತೆರೆಗೆ ಬಂದಿದೆ. ಬೆಳಗ್ಗೆಯಿಂದಲೇ ಎಲ್ಲ ಸಿನಿಮಾ ಥಿಯೇಟರ್‌ಗಳಲ್ಲೂ ಡಿ ಬಾಸ್ ಅಭಿಮಾನಿಗಳು ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ.
ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ದರ್ಶನ್ ಸಹೋದರ ದಿನಕರ್ ತೂಗುದೀಪ್ ಅವರು, ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅವರ ಅಭಿಮಾನಿಗಳು ಯಾವತ್ತೂ ಅವನನ್ನು ಕೈ ಬಿಡಲ್ಲ ಎಂದರು.
ಇನ್ನೂ ದರ್ಶನ್ ರಾಜಕೀಯಕ್ಕೆ ಪ್ರವೇಶಿಸುತ್ತಾರೆಂಬ ಸುದ್ದಿಯಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲವನ್ನೂ ದರ್ಶನ್ ಅವರ ಸೆಲೆಬ್ರಿಟೀಸ್‌ಗಳು ನಿರ್ಧಾರ ಮಾಡುತ್ತಾರೆ. ಬರಬೇಕಾ ಬೇಡ್ವಾ ಎಂದು ಅವರ ನಿರ್ಧಾರವೇ ಮುಖ್ಯ ಎಂದರು.
ಇದು ದರ್ಶನ್ ಅವರ ಕೊನೆ ಸಿನಿಮಾವಾ ಎಂದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಅವರು ಕಲಾಸೇವೆ ಮಾಡಲೆಂದೆ ಹುಟ್ಟಿದವನು. ಕೊನೆ ಉಸಿರಿರುವವರೆಗೂ ಅದನ್ನು ಮಾಡುತ್ತಲೇ ಇರುತ್ತಾನೆ ಎಂದರು.
ಬಹು ದಿನಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆ ಮೇಲೆ ನೋಡಿ ಅಭಿಮಾನಿಗಳು ಖುಷಿಪಟ್ಟರು. ಇನ್ನೂ ದರ್ಶನ್ ಅನುಪಸ್ಥಿಯಲ್ಲಿ ರಿಲೀಸ್ ಆದ ಸಿನಿಮಾಗೆ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ಸಹೋದರ ದಿನಕರ್ ತೂಗುದೀಪ್, ನಟ ಧನ್ವೀರ್, ನಟಿ ರಚನಾ ಅವರು ನರ್ತಕಿ ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಖುಷಿ ಪಟ್ಟರು.