Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ಶೂಟಿಂಗ್ ನಲ್ಲಿ ಆ ಕೆಲಸ ಮೊದಲು ಮಾಡ್ತಾರಂತೆ!

ಬಾಲಿವುಡ್ ನಟಿ ಶೂಟಿಂಗ್ ನಲ್ಲಿ ಆ ಕೆಲಸ ಮೊದಲು ಮಾಡ್ತಾರಂತೆ!
ಮುಂಬೈ , ಶನಿವಾರ, 22 ಆಗಸ್ಟ್ 2020 (17:27 IST)
ಬಾಲಿವುಡ್ ಯುವ ನಟಿಯೊಬ್ಬರು ಶೂಟಿಂಗ್ ನಡೆಯುತ್ತಿರುವಾಗ ಮೊದಲಿಗೆ ತಾವು ಆ ಕೆಲಸ ಮಾಡೋದಾಗಿ ಓಪನ್ ಆಗಿ ಹೇಳಿಕೊಂಡಿದ್ದಾರೆ.  

ಕೊರೊನಾ ಅನ್ ಲಾಕ್ ನಿಂದಾಗಿ ಚಿತ್ರೋದ್ಯಮ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಚಿತ್ರೀಕರಣ ಶುರುವಾಗಿವೆ.

ಈ ನಡುವೆ ನಟಿ ಅನನ್ಯಾ ಪಾಂಡೆ ಶೂಟಿಂಗ್‌ ವೇಳೆ ಮೊದಲಿಗೆ ಸುರಕ್ಷತೆಯ ಕೆಲಸ ಮಾಡುತ್ತಾರಂತೆ.  'ಸುರಕ್ಷತೆ ಮೊದಲು' ಎಂಬ ಮಂತ್ರವನ್ನೂ ರೂಢಿಸಿಕೊಂಡಿದ್ದಾರಂತೆ.

 ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅನನ್ಯಾ ಪಾಂಡೆ, "ಹಿಂತಿರುಗಿ, ಸುರಕ್ಷತೆ ಮೊದಲು"  ಎಂದು ಬರೆದುಕೊಂಡಿದ್ದಾರೆ. 

ನಟಿ ಇದೀಗ ತನ್ನ ಕೈಯಲ್ಲಿ ಹಲವಾರು ಯೋಜನೆಗಳನ್ನು ಹೊಂದಿದ್ದಾರೆ. "ಖಾಲಿ ಪೀಲಿ" ಚಿತ್ರದಲ್ಲಿ  ಇಶಾನ್ ಖಟ್ಟರ್ ಜೊತೆ ನಟಿಸುತ್ತಿದ್ದಾರೆ.

ಇನ್ನು, ಶಕುನ್ ಬಾತ್ರಾ ಅವರ ಮುಂದಿನ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರೊಂದಿಗೆ ನಟಿ ಅನನ್ಯಾ ಪಾಂಡೆ, ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿದ್ದಾರೆ. ತೆಲುಗು ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಅವರ ಮುಂದಿನ ಚಿತ್ರದಲ್ಲಿಯೂ ನಾಯಕಿಯಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ 14 ರಲ್ಲಿ ಸಲ್ಮಾನ್ ಖಾನ್ ಬಿಗ್ ಪ್ರಶ್ನೆ?