Select Your Language

Notifications

webdunia
webdunia
webdunia
Thursday, 10 April 2025
webdunia

ಸಂತೋಷ್ ಊರಿನಲ್ಲಿ ಎಂಜಾಯ್ ಮಾಡಿದ 'ಬಿಗ್‌ಬಾಸ್‌' ಮಂದಿ

Bigg Boss Contest

Sampriya

ಬೆಂಗಳೂರು , ಶುಕ್ರವಾರ, 10 ಮೇ 2024 (18:52 IST)
photo Courtesy Instagram
ಬೆಂಗಳೂರು: ಸ್ನೇಹ, ಪ್ರೀತಿ, ಕೋಪ ಎಲ್ಲವೂ ಇದ್ದ ಸೀಸನ್‌ ಅಂದರೆ ಅದು ಬಿಗ್‌ಬಾಸ್ ಕನ್ನಡ 10. ಇನ್ನೂ ಈ ಸೀಸನ್‌ನಲ್ಲಿದ್ದ ಸ್ಪರ್ಧಿಗಳು ದೊಡ್ಮನೆಯಿಂದ ಹೊರ ಬಂದ್ಮೇಲೂ ಆಗಾಗ ಪಾರ್ಟಿ, ಫ್ಯಾಮಿಲಿ ಫಂಕ್ಷನ್‌ನಲ್ಲಿ ಒಟ್ಟಿಗೆ ಕಾಣಿಸುತ್ತಾರೆ.

ಇದೀಗ ಈಗ ಸೀಸನ್‌ನಲ್ಲಿ ಗಮನ ಸೆಳೆದ ವರ್ತೂರು ಸಂತೋಷ್, ಸಿರಿ, ಅವಿನಾಶ್ ಶೆಟ್ಟಿ, ತನಿಷಾ ಕುಪ್ಪಂಡ ಬಹುದಿನಗಳ ನಂತರ ಭೇಟಿಯಾಗಿದ್ದಾರೆ. ವರ್ತೂರಿನಲ್ಲಿ ಒನ್ ಡೇ ಔಟಿಂಗ್ ಮಾಡಿದ್ದಾರೆ. ಸದ್ಯ ಮೀಟ್ ಆಗಿರುವ 'ಬಿಗ್ ಬಾಸ್' ತಾರೆಯರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಲಾಟೆ, ಗದ್ದಲದ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದೀಗ ಈ ಶೋ ಮುಗಿದ 'ಬಿಗ್ ಬಾಸ್' ಸ್ಪರ್ಧಿಗಳು ಒಬ್ಬರನ್ನೊಬ್ಬರು ಮರೆತ್ತಿಲ್ಲ.  ಅಲ್ಲಿಯೇ ಇದ್ದ ತೋಟಕ್ಕೆ ಭೇಟಿ ನೀಡಿ ಪ್ರಾಣಿ-ಪಕ್ಷಿಗಳ ಜೊತೆ ಸಮಯ ಕಳೆದಿದ್ದಾರೆ.
ತೋಟದಲ್ಲಿದ್ದ ಹಣ್ಣುಗಳನ್ನು ಸವಿದು ಖುಷಿಪಟ್ಟಿದ್ದಾರೆ. ಒಟ್ಟಲ್ಲಿ ಸಂತೋಷ್‌ ಅವರ ಊರಿನಲ್ಲಿ ಎಲ್ಲರೂ ಮಸ್ತ್‌ ಆಗಿ ಎಂಜಾಯ್‌ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದ ಅತ್ಯಂತ ಕುಳ್ಳಗಿರುವ ಗಾಯಕ ಅಬ್ದು ರೋಝಿಕ್‌ಗೆ ಕೂಡಿಬಂತು ಕಂಕಣಭಾಗ್ಯ