Select Your Language

Notifications

webdunia
webdunia
webdunia
webdunia

ಜೈಲಿನಿಂದ ಹೊರಬಂದಿರುವ ಸೋನು ಗೌಡ ಫುಲ್‌ ಸೈಲೆಂಟ್‌ ಮೂಡ್‌ನಲ್ಲಿ

ಜೈಲಿನಿಂದ ಹೊರಬಂದಿರುವ ಸೋನು ಗೌಡ ಫುಲ್‌ ಸೈಲೆಂಟ್‌ ಮೂಡ್‌ನಲ್ಲಿ

Sampriya

ಬೆಂಗಳೂರು , ಭಾನುವಾರ, 7 ಏಪ್ರಿಲ್ 2024 (17:21 IST)
Photo Courtesy X
ಬೆಂಗಳೂರು:  ಬಾಲಕಿ ದತ್ತು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಿಗ್‌ಬಾಸ್ ಸ್ಪರ್ಧಿ ಸೋನು ಗೌಡ ನಿನ್ನೆ ಷರತ್ತು ಬದ್ಧ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ.

ಜೈಲಿನಿಂದ ಹೊರಬಂದ ಬಳಿಕ ಸೋನು ಶ್ರೀನಿವಾಸ್​ ಗೌಡ ಸಂಪೂರ್ಣ ಸೈಲೆಂಟ್‌ ಆಗಿದ್ದು, ಮಾಧ್ಯಮದ ಮುಂದೆ ಯಾವುದೇ ಹೇಳಿಕೆಯನ್ನು ನೀಡದೆ ಮನೆಗೆ ತೆರೆಳಿದ್ದಾರೆ.

ಪರಪ್ಪನ ಅಗ್ರಹಾರದಿಂದ ರಿಲೀಸ್​ ಆಗಿ ಬಂದಿರುವ ಅವರನ್ನು ಸಂಬಂಧಿಕರು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಾಧ್ಯಮದವರು ಅವರನ್ನು ಪ್ರಶ್ನಿಸಿದ್ದರು,  ಲಾಯರ್​ ಸೂಚನೆ ಮೇರೆಗೆ ಸೋನು ಗೌಡ ಅವರು ಒಂದು ಅಕ್ಷರವನ್ನೂ ಮಾತನಾಡಿಲ್ಲ. ಸದ್ಯಕ್ಕಂತೂ ಅವರು ಸಂಪೂರ್ಣ ಸೈಲೆಂಟ್​ ಆಗಿದ್ದಾರೆ.

ಗಾಸಿಪ್ ಹಾಗೂ ರೀಲ್ಸ್‌ ಮೂಲಕ ಟ್ರೆಂಡಿಂಗ್‌ನಲ್ಲಿರುತ್ತಿದ್ದ ಸೋನು ಗೌಡ ಅವರು ಬಿಗ್‌ಬಾಸ್‌ಗೆ ತೆರಳಿ ಹೆಚ್ಚು ಜನಮನ್ನಣೆ ಗಳಿಸಿದ್ದರು. ಇನ್ನೂ ಬಿಗ್‌ಬಾಸ್‌ನಿಂದ ಹೊರಬಂದ ಮೇಲೆ ಯೂಟ್ಯೂಬ್ ವಿಡಿಯೋ ಹಾಗೂ ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದರು. ತಿಂಗಳ ಹಿಂದೆ ಬಾಲಕಿಯನ್ನು ದತ್ತು ಪಡೆದುಕೊಂಡಿರುವುದಾಗಿ ವಿಡಿಯೋವನ್ನು ಹಂಚಿಕೊಂಡಿದ್ದರು.

ಅಕ್ರಮವಾಗಿ ಮಗು ಪಡೆದ ಪ್ರಕರಣದಡಿಯಲ್ಲಿ ಸೋನು ಅವರನ್ನು ಬಂಧಿಸಲಾಗಿತ್ತು. ಇನ್ನೂ  ಈ ಪ್ರಕರಣದ  ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಜಾಮೀನಿನ ಮೇಲೆ ಸೋನು ಶ್ರೀನಿವಾಸ್​ ಗೌಡ ಹೊರಗೆ ಬಂದಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕವಾದರೂ ಅವರು ಏನಾದರೂ ಸ್ಪಷ್ಟನೆ ನೀಡುತ್ತಾರಾ ಎಂಬ ಕೌತುಕ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀವು ನಮ್ಮ ಜತೆಯಿರಬೇಕು, ಈಶ್ವರಪ್ಪ ಇನ್ನೂ ಕಾಲ ಮಿಂಚಿಲ್ಲ ವಾಪಾಸ್ ಬನ್ನಿ: ವಿಜಯೇಂದ್ರ