Select Your Language

Notifications

webdunia
webdunia
webdunia
webdunia

ವಿಶ್ವದ ಅತ್ಯಂತ ಕುಳ್ಳಗಿರುವ ಗಾಯಕ ಅಬ್ದು ರೋಝಿಕ್‌ಗೆ ಕೂಡಿಬಂತು ಕಂಕಣಭಾಗ್ಯ

Abdu Zorik

Sampriya

ಮುಂಬೈ , ಶುಕ್ರವಾರ, 10 ಮೇ 2024 (15:45 IST)
Photo Courtesy X
ಮುಂಬೈ:  ವಿಶ್ವದ ಅತ್ಯಂತ ಕುಳ್ಳಗಿರುವ ಗಾಯಕ ಮತ್ತು ಬಿಗ್ ಬಾಸ್ 16 ಖ್ಯಾತಿಯ ಅಬ್ದು ರೋಝಿಕ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಜುಲೈ 7 ರಂದು ಇವರು ಎಮಿರಾಟಿ ಎಂಬ ಹುಡುಗಿ ಜತೆ ಇವರ ನಿಶ್ಚಿತಾರ್ಥ ನಡೆಯಲಿದೆ.  ಕುಳ್ಳಗಿರುವ ದೇಹದೊಂದಿಗೆ ತಮ್ಮ ಆಕರ್ಷಕ ವ್ಯಕ್ತಿತ್ವ ಮತ್ತು ವಿಶಿಷ್ಟ ಪ್ರತಿಭೆಯಿಂದ ಖ್ಯಾತಿಗಳಿಸಿರುವ ಅಬ್ದು ವಿಶ್ವದಾದ್ಯಂತ ಅಭಿಮಾನಿಗಳ ಹೃದಯವನ್ನು ಕದ್ದಿದ್ದಾರೆ.

ಜುಲೈ 7ರಂದು ಶಾರ್ಜಾದ ಎಮಿರಾಟಿ ಹುಡುಗಿಯೊಂದಿಗೆ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಇನ್ನೂ ವಿಡಿಯೋ ಮಾಡಿ ಎಂಗೇಜ್‌ಮೆಂಟ್ ವಿಚಾರ ಘೋಷಿಸಿದ್ದಾರೆ.

ಅಬ್ದು ಅವರು ತಮ್ಮ ಮದುವೆಯ ಬಗ್ಗೆ ಅಭಿಮಾನಿಗಳಿಗೆ ಘೋಷಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಜುಲೈ 7 ರ ದಿನಾಂಕವನ್ನು ಉಳಿಸಿ, ನನ್ನನ್ನು ಗೌರವಿಸುವ ಮತ್ತು ನನ್ನ ಜೀವನದಲ್ಲಿನ ಅಡೆತಡೆಗಳಿಂದ ಹೊರೆಯಾಗದ ಪ್ರೀತಿಯನ್ನು ಪಡೆಯುವ ಅದೃಷ್ಟವನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಊಹಿಸಿರಲಿಲ್ಲ !! ಎಷ್ಟು ಸಂತೋಷವನ್ನು ನಾನು ಪದಗಳಲ್ಲಿ ಹೇಳಲಾರೆ. ನಾನು #ಪ್ರೀತಿ #ಮದುವೆ #ನಿಶ್ಚಿತಾರ್ಥ #ಜೀವನ #ವಿವಾಹ #ಪ್ರಣಯ #ಜೀವನ ಸಂಗಾತಿ #ನಿಶ್ಚಿತಾರ್ಥಿ"

ಅಬ್ದು ರೋಝಿಕ್ ತಮ್ಮ ಸಂಗೀತದ ಮೂಲಕ ಖ್ಯಾತಿಯನ್ನು ಗಳಿಸಿದರು ಮತ್ತು ಅಂದಿನಿಂದ ಮನರಂಜನಾ ಜಗತ್ತಿನಲ್ಲಿ ಪ್ರೀತಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.  20 ವರ್ಷದ ಅಬ್ದು ಅವರು ಕುಳ್ಳಗಿರುವ ವ್ಯಕ್ತಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವರಕೊಂಡ ಬರ್ತ್‌ಡೇಗೆ ವಿಶ್‌ ಮಾಡದ ರಶ್ಮಿಕಾ: ಅಭಿಮಾನಿಗಳಲ್ಲಿ ಹುಟ್ಟುಹಾಕಿದೆ ಅನುಮಾನ