Select Your Language

Notifications

webdunia
webdunia
webdunia
webdunia

ದೇವರಕೊಂಡ ಬರ್ತ್‌ಡೇಗೆ ವಿಶ್‌ ಮಾಡದ ರಶ್ಮಿಕಾ: ಅಭಿಮಾನಿಗಳಲ್ಲಿ ಹುಟ್ಟುಹಾಕಿದೆ ಅನುಮಾನ

Vijay Devarkonda

Sampriya

ಹೈದರಾಬಾದ್‌ , ಶುಕ್ರವಾರ, 10 ಮೇ 2024 (14:21 IST)
Photo Courtesy X
ಹೈದರಾಬಾದ್‌: ಗೀತ ಗೋವಿಂದಂ ಖ್ಯಾತಿಯ ವಿಜಯ್ ದೇವರಕೊಂಡ ಅವರು ಗುರುವಾರ ಜನ್ಮದಿನವನ್ನು ಆಚರಿಸಿಕೊಂಡರು. ಆದರೆ, ರಶ್ಮಿಕಾ ಮಂದಣ್ಣ ಅವರು ವಿಜಯ್​ಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರದಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ.

ಸೂಪರ್‌ ಹಿಟ್‌ ಆದ ಗೀತ ಗೋವಿಂದಂ ಸಿನಿಮಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಒಟ್ಟಾಗಿ ನಟಿಸಿದರು. ಈ ಜೋಡಿಯನ್ನು ಪ್ರೇಕ್ಷಕರು ಸಖತ್ ಇಷ್ಟಪಟ್ಟರು. ಸಿನಿಮಾ ಬಿಡುಗಡೆ, ಬರ್ತ್‌ಡೇ ವೇಳೆಯಲ್ಲಿ ಒಬ್ಬರಿಗೊಬ್ಬರು ಆತ್ಮೀಯವಾಗಿ ಶುಭಕೋರುವ ಮೂಲಕ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಗಾಸಿಪ್‌ ಹರಡಿರುವ ಬೆನ್ನಲ್ಲೇ, ಈಗ ರಶ್ಮಿಕಾ ಬರ್ತ್​ಡೇಗೆ ವಿಶ್ ಮಾಡದೆ ಇರುವುದು ಅನುಮಾನ ಮೂಡಿಸಿದೆ.

ಕಳೆದ ವರ್ಷ ವಿಜಯ್‌ ಬರ್ತ್‌ಡೇಗೆ ರಶ್ಮಿಕಾ ಅವರು ಇನ್​ಸ್ಟಾಗ್ರಾಮ್ ಸ್ಟೇಟಸ್ ಮೂಲಕ ವಿಶ್ ಮಾಡಿದ್ದರು. ಈ ಬಾರಿ ಅವರು ಮುಂದಿನ ಸಿನಿಮಾದ ಬಗ್ಗೆ ಘೋಷಣೆ ಮಾಡಿಕೊಂಡಿದ್ದಾರೆ ಅಷ್ಟೇ. ಅದನ್ನು ಹೊರತುಪಡಿಸಿ ಅವರು ಯಾವುದೇ ಸ್ಟೇಟಸ್ ಹಾಕಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಸಹಜವಾಗಿ ಅಭಿಮಾನಿಗಳಲ್ಲಿ ಮೂಡಿದೆ.

ರಶ್ಮಿಕಾ ಮಂದಣ್ಣಗೆ ಬಂಪರ್ ಆಫರ್ ಸಿಕ್ಕಿದೆ. ಸಿಕಂದರ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ಇವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ರಶ್ಮಿಕಾ ನಾಯಕಿ ಆಗೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ರಶ್ಮಿಕಾ ಹಾಗೂ ವಿಜಯ್  ಈ ಮೊದಲು ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇದರಲ್ಲಿ ಗೀತ ಗೋವಿಂದ ಸಿನಿಮಾ ಸೂಪರ್ ಹಿಟ್ ಆಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಡೆವಿಲ್ ಮೇಕಿಂಗ್ ವಿಡಿಯೋದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಭಿನ್ನ ಅವತಾರ