Select Your Language

Notifications

webdunia
webdunia
webdunia
webdunia

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇಂದು ‘ಡೆವಿಲ್’ ಹಬ್ಬ

Darshan

Krishnaveni K

ಬೆಂಗಳೂರು , ಶುಕ್ರವಾರ, 10 ಮೇ 2024 (09:04 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇಂದು ಡೆವಿಲ್ ಹಬ್ಬ! ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಡೆವಿಲ್ ಸಿನಿಮಾದ ಝಲಕ್ ಇಂದು ಸಿಗುತ್ತಿದೆ.

ಇಂದು ಅಕ್ಷಯ ತೃತೀಯದ ಶುಭ ದಿನ ಚಿತ್ರತಂಡ ಅಭಿಮಾನಿಗಳಿಗಾಗಿ ಡೆವಿಲ್ ಸಿನಿಮಾದ ಮೇಕಿಂಗ್ ವಿಡಿಯೋ ಹೊರಬಿಡಲಿದೆ. ಈ ಸುದ್ದಿ ಮೊನ್ನೆಯಿಂದ ಅಭಿಮಾನಿಗಳಿಗೆ ಹೊಸ ಸಂಚಲನ ಮೂಡಿಸಿದೆ. ಮೊನ್ನೆಯಷ್ಟೇ ಚಿತ್ರತಂಡ ಮೇಕಿಂಗ್ ವಿಡಿಯೋ ರಿಲೀಸ್ ಮಾಡುತ್ತಿರುವುದಾಗಿ ಘೋಷಿಸಿತ್ತು.

ಕಾಟೇರ ಸಿನಿಮಾ ಯಶಸ್ಸಿನ ಬಳಿಕ ದರ್ಶನ್ ಮಾಡುತ್ತಿರುವ ಮತ್ತೊಂದು ಸಿನಿಮಾವಿದು. ಮಿಲನ ಸಿನಿಮಾ ಖ‍್ಯಾತಿಯ ಪ್ರಕಾಶ್ ವೀರ್ ಈ ಸಿನಿಮಾಗೆ ನಿರ್ದೇಶಕರಾಗಿದ್ದಾರೆ. ಜಯಣ್ಣ ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಚಿತ್ರದ ಕೆಲವು ಭಾಗದ ಚಿತ್ರೀಕರಣವೂ ನಡೆದಿದೆ.

ಬೆಂಗಳೂರಿನಲ್ಲಿ ವಿಶೇಷ ಸೆಟ್ ನಲ್ಲಿ ಚಿತ್ರೀಕರಣ ನಡೆದಿದೆ. ಈ ನಡುವೆ ದರ್ಶನ್ ಕೈಗೆ ಏಟು ಮಾಡಿಕೊಂಡು ಕೆಲವು ದಿನ ಬ್ರೇಕ್ ಕೂಡಾ ಪಡೆದುಕೊಂಡರು. ಇದೀಗ ಅವರು ಚೇತರಿಸಿಕೊಂಡಿದ್ದಾರೆ. ಇದಕ್ಕೆ ಮೊದಲು ಚಿತ್ರತಂಡ ಡೆವಿಲ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೂ ಒಂದು ವಾರ ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ