ಬೆಂಗಳೂರು: ಕನ್ನಡ ಬಿಗ್ಬಾಸ್ ಸೀಸನ್ 10ರಲ್ಲಿ ನೇರ ಹಾಗೂ ದಿಟ್ಟವಾಗಿ ಮಾತನಾಡಿ ಬೆಂಕಿ ಸ್ಪರ್ದಿ ಎಂದೇ ಕರೆಸಿಕೊಂಡಿರುವ ತನೀಷಾ ಕುಪ್ಪಂಡ ಅವರು ಹೊಸ ಬಿಸಿನೆಸ್ವೊಂದನ್ನು ಶುರು ಮಾಡಿದ್ದಾರೆ.
ಬಿಗ್ಬಾಸ್ಗೆ ಹೋಗುವ ಮುನ್ನಾವೇ ಹೊಟೇಲ್ ಉದ್ಯಮದಲ್ಲಿದ್ದ ತನೀಷಾ ಅವರು ಇದೀಗ ಬೆಂಗಳೂರಿನ ವಿಜಯ ನಗರದಲ್ಲಿ ಆಭರಣ ಉದ್ಯಮವನ್ನು ಆರಂಭಿಸಿದ್ದಾರೆ.
ಸಿಲ್ವರ್ ಜ್ಯುವೆಲ್ಲರಿ ಉದ್ಯಮಕ್ಕೆ ಕಾಲಿಟ್ಟಿರುವ ತನಿಷಾ ಕುಪ್ಪಂಡ, ಕುಪ್ಪಂಡಾಸ್ ಎಂಬ ತಮ್ಮದೇ ಬ್ರ್ಯಾಂಡ್ ಆರಂಭಿಸಿದ್ದಾರೆ. ಇನ್ನೂ ಉದ್ಘಾಟನಾ ಸಮಾರಂಭಕ್ಕೆ ಬಿಗ್ಬಾಸ್ ಸ್ಪರ್ಧಿಗಳಾದ ಕಾರ್ತಿಕ್ ಮಹೇಶ್, ವಿನಯ್ ಗೌಡ, ನಮ್ರತಾ ಗೌಡ, ಪವಿ ಪೂವಪ್ಪ, ವರ್ತೂರ್ ಸಂತೋಷ್ ಅವರು ಭೇಟಿ ಕೊಟ್ಟಿದ್ದರು.
ಅದಲ್ಲದೆ 'ಗೀತಾ' ಧಾರವಾಹಿಯ ಭವ್ಯಾ ಗೌಡ ಸೇರಿದಂತೆ ಕಿರುತೆರೆ ಕಲಾವಿದರು ಆಗಮಿಸಿದ್ದರು.