Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬಕ್ಕೆ 4 ಸಾವಿರ ಜನಕ್ಕೆ ಊಟ ಹಾಕ್ತಿದ್ದಾರೆ ವರ್ತೂರು ಸಂತೋಷ್

varthur Santhosh

Krishnaveni K

ಬೆಂಗಳೂರು , ಮಂಗಳವಾರ, 12 ಮಾರ್ಚ್ 2024 (11:53 IST)
Photo Courtesy: facebook
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಮೂಲಕ ಮನೆ ಮನೆಗೂ ಪರಿಚಿತರಾದ ಹಳ್ಳಿಕಾರ್ ವರ್ತೂರು ಸಂತೋಷ್ ತಮ್ಮ ಹುಟ್ಟುಹಬ್ಬಕ್ಕೆ 4 ಸಾವಿರ ಜನಕ್ಕೆ ಊಟ ಹಾಕಿದ್ದಾರೆ.

ವರ್ತೂರು ಸಂತೋಷ್ ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ನಿನ್ನೆ ಮಧ್ಯರಾತ್ರಿಯಿಂದಲೇ ಅವರ ಅಭಿಮಾನಿಗಳು ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಅಭಿಮಾನಿಗಳ ಜೊತೆ ಸಂತೋಷ್ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದರು. ಇದೀಗ ಸಾವಿರಾರು ಜನರಿಗೆ ಅನ್ನದಾನ ಮಾಡಿದ್ದಾರೆ.

ಬಿಗ್ ಬಾಸ್ ಶೋನಿಂದಾಗಿ ವರ್ತೂರು ಸಂತೋಷ್ ಸ್ಟಾರ್ ಆದರು. ಅವರನ್ನು ಫಾಲೋ ಮಾಡುವ ಎಷ್ಟೋ ಅಭಿಮಾನಿಗಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಅವರನ್ನು ಬೆಂಬಲಿಸಿದ ಅಭಿಮಾನಿಗಳಿಗೆ ವರ್ತೂರು ಸಂತೋಷ್ ಈ ರೀತಿ ಧನ್ಯವಾದ ಹೇಳುತ್ತಿದ್ದಾರೆ.

ತಮಗೆ ಶುಭಾಶಯ ಕೋರಲು ಮನೆ ಬಳಿ ಬಂದ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕವೂ ಅನೇಕರು ವರ್ತೂರು ಸಂತೋಷ್ ಗೆ ಶುಭಾಶಯ ತಿಳಿಸಿದ್ದರು. ತಮಗೆ ಸಿಕ್ಕ ಸ್ಟಾರ್ ಡಂಗೆ ಜನರೇ ಕಾರಣ. ಹೀಗಾಗಿ ಅವರಿಗೆ ಮರಳಿ ಉಡುಗೊರೆ ನೀಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಎ ಜಾರಿಯಾಗದಂತೆ ನೋಡಿಕೊಳ್ಳಬೇಕು: ದಳಪತಿ ವಿಜಯ್ ಆಕ್ರೋಶ