Select Your Language

Notifications

webdunia
webdunia
webdunia
webdunia

‘ಆರ್ಟಿಕಲ್ 15’ ತಮಿಳು ರಿಮೇಕ್ ನಲ್ಲಿ ಬಿಗ್ ಬಾಸ್ ವಿಜೇತ ಆರಿ ಅರ್ಜುನ್

webdunia
ಚೆನ್ನೈ , ಗುರುವಾರ, 29 ಏಪ್ರಿಲ್ 2021 (13:17 IST)
ಚೆನ್ನೈ : ನಿರ್ದೇಶಕ ಮೈಸ್ಕಿನ್ ಅವರ ಸೈಕೋ ಚಿತ್ರದಲ್ಲಿ ಕಾಣಿಸಿಕೊಂಡ ನಟ ಉದಯ ನಿಧಿ ಸ್ಟಾಲಿನ್ ಅವರು ಈಗ ಆಯುಷ್ಮಾನ್ ಖುರಾನ್ ಅವರ ಖ್ಯಾತ ಹಿಂದಿ ಚಿತ್ರ ‘ಆರ್ಟಿಕಲ್ 15’ ತಮಿಳು ರಿಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು, ನಟ ಮತ್ತು ಬಿಗ್ ಬಾಸ್ ವಿಜೇತ ಆರಿ ಅರ್ಜುನ್ ಈ ಚಿತ್ರದಲ್ಲಿ ಸಣ್ಣ ಮತ್ತು ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಈ ಚಿತ್ರವನ್ನು 2018ರಲ್ಲಿ ‘ಕಾನಾ; ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಅರುಣರಾಜ ಕಾಮರಾಜ್ ನಿರ್ದೇಶಿಸಲಿದ್ದಾರೆ.

ಜಾತಿ ವಿಭಜನೆಯ  ಸಮಸ್ಯೆಗಳಿರುವ ಗ್ರಾಮೀಣ ಪ್ರದೇಶಕ್ಕೆ ನೇಮಕಗೊಂಡ ಉನ್ನತ ದರ್ಜೆಯ ಪೊಲೀಸ್ ಅಧಿಕಾರಿ ಕಥೆ ಇದಾಗಿದೆ. ಇದು ಸಂವಿಧಾನದ ‘ಆರ್ಟಿಕಲ್ 15’  ರ ಸುತ್ತ ಸುತ್ತುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರೈಜಾ ವಿಸನ್ ವಿರುದ್ಧ 5ಕೋಟಿ ಮಾನನಷ್ಟ ಮೊಕ್ಕದ್ದಮೆ ಹೂಡಿದ ಚರ್ಮರೋಗ ವೈದ್ಯ