Publish Date: Sun, 07 Jan 2018 (06:10 IST)
Updated Date: Sun, 07 Jan 2018 (06:14 IST)
ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆದ ಸ್ಪರ್ಧಿ ಕೃಷಿ ತಾಪಂಡ. ವಿಶೇಷವೆಂದರೆ ಅವರು ಎಲಿಮಿನೇಟ್ ಆಗುತ್ತಿರುವುದು ಎರಡನೇ ಬಾರಿ.
ನಿನ್ನೆ ನಡೆದ ವಾರದ ಕತೆ ಕಿಚ್ಚನ ಜತೆಯಲ್ಲಿ ಸುದೀಪ್ ಇದನ್ನು ಪ್ರಕಟಿಸಿದ್ದಾರೆ. ಇದಕ್ಕಿಂತ ಮೊದಲೂ ಕೃಷಿ ಒಮ್ಮೆ ಎಲಿಮಿನೇಟ್ ಆಗಿದ್ದರೂ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆ ಒಳಗೆ ಪ್ರವೇಶಿಸಿದ್ದರು. ಇದೀಗ ಮತ್ತೆ ಎಲಿಮಿನೇಟ್ ಆಗಿದ್ದಾರೆ. ಈ ಬಾರಿ ಮತ್ತೆ ಮನೆಗೆ ಪ್ರವೇಶಿಸುವ ಸಾಧ್ಯತೆಯಿಲ್ಲ.
ಆದರೆ ಕೃಷಿ ಅಭಿಮಾನಿಗಳು ಅನುಪಮಾ ಗೌಡ ಅಥವಾ ಶ್ರುತಿಯನ್ನು ಬಚಾವ್ ಮಾಡಿ ಟಾಸ್ಕ್ ಚೆನ್ನಾಗಿ ಮಾಡುತ್ತಿದ್ದ ಕೃಷಿಯನ್ನು ಹೊರ ಕಳುಹಿಸಿದ್ದು ಯಾಕೆ ಎಂದು ತಕರಾರು ತೆಗೆದಿದ್ದಾರೆ. ಆದರೆ ಇದೆಲ್ಲಾ ಮಾಮೂಲಿ ಬಿಡಿ. ಈ ನಡುವೆ ಸೀಕ್ರೆಟ್ ರೂಂ ನಲ್ಲಿದ್ದ ದಿವಾಕರ್ ರನ್ನು ಮತ್ತೆ ಮನೆ ಒಳಗೆ ಕರೆಸಿಕೊಳ್ಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ