ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಈಗ ಮತ್ತಷ್ಟು ಹತ್ತಿರವಾಗಿದ್ದಾರೆ. ವಿಚ್ಛೇದನದ ಕಹಿ ಗಳಿಗೆಯನ್ನೆಲ್ಲಾ ಮರೆತಿದ್ದಾರೆ. ಇಂತಿಪ್ಪ ಕಿಚ್ಚ ಇದೀಗ ತಮ್ಮ ಪತ್ನಿಗೆ ರೊಮ್ಯಾಂಟಿಕ್ ಆಗಿ ಶುಭ ಹಾರೈಸಿದ್ದಾರೆ.
ಅಂದ ಹಾಗೆ ಇಂದು ಪ್ರಿಯಾ ಸುದೀಪ್ ಜನ್ಮದಿನ. ಪತ್ನಿಯ ಬರ್ತ್ ಡೇ ವಿಚಾರವನ್ನು ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದು ಒಂದು ರೊಮ್ಯಾಂಟಿಕ್ ಸಂದೇಶವನ್ನೂ ಬರೆದಿದ್ದಾರೆ.
‘ನೀನೊಂದು ಅದ್ಭುತ ವ್ಯಕ್ತಿ. ನಿನಗೆ ಶುಭ ಹಾರೈಕೆಗಳು. ನೀನು ನನ್ನ ಶಕ್ತಿ, ತಾಳ್ಮೆ ಮತ್ತು ಗೌರವದ ಪ್ರತೀಕ. ಯಾವತ್ತೂ ನಿನಗೆ ನನ್ನ ಪ್ರೀತಿಯ ಸುರಿಮಳೆಯಿರುತ್ತದೆ. 2018 ನಿನಗೆ ಅದ್ಭುತ ವರ್ಷವಾಗಿರಲಿ’ ಎಂದು ಸುದೀಪ್ ಪತ್ನಿಗೆ ವಿಷ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ