Publish Date: Sat, 06 Jan 2018 (10:25 IST)
Updated Date: Sat, 06 Jan 2018 (10:26 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಮತ್ತೊಂದು ಶನಿವಾರ ಬಂದಿದೆ. ಇಂದು ಮತ್ತೊಂದು ಬಿಗ್ ವಿಕೆಟ್ ಬೀಳುವುದು ಗ್ಯಾರಂಟಿ. ಆದರೆ ಇಂದು ಹೊರ ಹೋಗುವವರು ಯಾರು ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.
ಜೆಕೆ ಈಗಾಗಲೇ ಈ ವಾರ ತಾವೇ ಮನೆಯಿಂದ ಹೊರಹೋಗುತ್ತೇವೆಂದು ಸಮೀರ್ ಆಚಾರ್ಯ ಜತೆ ಐದು ಲಕ್ಷ ರೂ.ಗಳ ಬೆಟ್ಟಿಂಗ್ ಮಾಡಿದ್ದಾರೆ. ಅತ್ತ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಅನುಪಮಾ ಗೌಡ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಇನ್ನು ಕೆಲವರು ಏನೂ ಟಾಸ್ಕ್ ನೀಡದೇ ಸೀಕ್ರೆಟ್ ರೂಂನೊಳಗೆ ಕೂತಿರುವ ದಿವಾಕರ್ ನನ್ನು ಬಿಗ್ ಬಾಸ್ ಹೊರ ಕಳುಹಿಸುವ ಯೋಜನೆ ಹಾಕಿಕೊಂಡಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಯಾರೇ ಹೋದರೂ ಈ ವಾರ ಬಿಗ್ ವಿಕೆಟ್ ಪತನ ಗ್ಯಾರಂಟಿ. ಇಂದು ರಾತ್ರಿ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ