Select Your Language

Notifications

webdunia
webdunia
webdunia
webdunia

ಡಾರ್ಲಿಂಗ್ ಕೃಷ್ಣನ ಹೊಸ ಸಿನಿಮಾಗೆ ಭಾವನಾ ನಾಯಕಿ

webdunia
ಭಾನುವಾರ, 2 ಆಗಸ್ಟ್ 2020 (11:17 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಾಯಕರಾಗಿ ಅಭಿನಯಿಸಲಿರುವ ‘ಶ್ರೀಕೃಷ್ಣ@ಜಿಮೈಲ್.ಕಾಮ್’ ಸಿನಿಮಾಗೆ ನಾಯಕಿ ಯಾರೆಂಬುದು ಪಕ್ಕಾ ಆಗಿದೆ.

 

ನಾಗಶೇಖರ್ ನಿರ್ದೇಶನದ ಈ ಸಿನಿಮಾದಲ್ಲಿ ‘ಜಾಕಿ’ ಖ್ಯಾತಿಯ ನಟಿ ಭಾವನಾ ಮೆನನ್ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ವಿಚಾರವನ್ನು ಸ್ವತಃ ಕೃಷ್ಣ ಕನ್ ಫರ್ಮ್ ಮಾಡಿದ್ದಾರೆ.

ಸಂದೇಶ ನಾಗರಾಜ್ ನಿರ್ಮಾಣದ ಈ ಸಿನಿಮಾದಲ್ಲಿ ಈ ಮೊದಲು ರಾಧಿಕಾ ಕುಮಾರಸ್ವಾಮಿ ನಾಯಕಿಯಾಗುತ್ತಾರೆ ಎಂಬ ಸುದ್ದಿಯಿತ್ತು. ಆದರೆ ಅದೀಗ ಸುಳ್ಳಾಗಿದ್ದು ಭಾವನಾ ನಾಯಕಿಯಾಗುವುದು ಪಕ್ಕಾ ಆಗಿದೆ. ಅರ್ಜುನ್ ಜನ್ಯಾ ಈ ಸಿನಿಮಾಗೆ ಸಂಗೀತ ಸಂಯೋಜಿಸುತ್ತಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಉದ್ಯೋಗಾವಕಾಶ ನೀಡ್ತಿದ್ದಾರೆ ರಕ್ಷಿತ್ ಶೆಟ್ಟಿ