Select Your Language

Notifications

webdunia
webdunia
webdunia
webdunia

ದೇಹ ದಂಡಿಸಲು ಪುನೀತ್ ಗೆ ಡಾ. ರಾಜ್ ಸಲಹೆ ನೀಡುತ್ತಿದ್ದರಂತೆ!

ಡಾ. ರಾಜಕುಮಾರ್
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವರ್ಕೌಟ್ ಮಾಡುವುದರಲ್ಲಿ ನಿಸ್ಸೀಮ. ಅವರ ವರ್ಕೌಟ್ ವಿಡಿಯೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.


ಇತ್ತೀಚೆಗೆ ಅಂತಹದ್ದೇ ಒಂದು ವರ್ಕೌಟ್ ವಿಡಿಯೋವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಇದನ್ನು ವೀಕ್ಷಿಸಿದ ನವರಸನಾಯಕ ಜಗ್ಗೇಶ್ ಹಿಂದೆ ಡಾ. ರಾಜ್, ಪುನೀತ್ ಗೆ ಸಲಹೆ ನೀಡುತ್ತಿದ್ದುದನ್ನು ನೆನೆಸಿಕೊಂಡಿದ್ದಾರೆ.

‘ರಾಜಣ್ಣನ ಮಡಿಲಲ್ಲಿ ಪುನೀತ್ ಕೂರುತ್ತಿದ್ದರು. ರಾಜಣ್ಣ ತಲೆಸವರಿ ಕಂದ ನೀನು ಚೆನ್ನಾಗಿ ಓಡಿ ದೇಹ ದಂಡಿಸಬೇಕು ಎನ್ನುತ್ತಿದ್ದರು. ಪುನೀತ್ ಮಗುವಂತೆ ಹುಂ ಎನ್ನುತ್ತಿದ್ದರು. ಅಂದು ಅಣ್ಣಾವ್ರ ಮಡಿಲಲ್ಲಿ ಇದ್ದ ಮಗು ಇಂದು ಕನ್ನಡಿಗರ ಮಡಿಲಲ್ಲಿ ಬೆಳೆದು ನಿಂತ ಹೆಮ್ಮರ. ಅಪ್ಪನಂತೆ ಇವ, ನನ್ನ ಪ್ರಿಯ’ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ತಂಗಿಯಿಂದ ಪ್ರಧಾನಿ ಮೋದಿಗೆ ಪತ್ರ