Publish Date: Mon, 17 Jan 2022 (09:00 IST)
Updated Date: Mon, 17 Jan 2022 (09:23 IST)
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯರ ಬಗ್ಗೆ ಸುಳ್ಳು ಸುದ್ದಿ ಹರಿದಾಡಿ ಫಜೀತಿಯಾಗುವುದು ಇದೇ ಮೊದಲೇನಲ್ಲ. ಇದೀಗ ಮಲಯಾಳಂ ಮೂಲದ ನಟಿ ಭಾಮಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುಳ್ಳು ಸುದ್ದಿಯೊಂದು ಹರಿದಾಡಿತ್ತು.
ಭಾಮಾ ನಿದ್ರೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇತ್ತೀಚೆಗೆ ಮದುವೆಯಾಗಿ ಒಂದು ಮುದ್ದು ಹೆಣ್ಣು ಮಗುವಿನ ತಾಯಿಯಾಗಿರುವ ಭಾಮಾ ಬಗ್ಗೆ ಇಂತಹದ್ದೊಂದು ಸುದ್ದಿ ಬಂದಾಗ ಸಹಜವಾಗಿಯೇ ಎಲ್ಲರಲ್ಲಿ ಆತಂಕವಾಗಿತ್ತು.
ಆದರೆ ಈಗ ಇದಕ್ಕೆ ಸ್ಪಷ್ಟನೆ ನೀಡಿರುವ ನಟಿ, ಇತ್ತೀಚೆಗೆ ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಪೋಲ ಕಲ್ಪಿತ ಸುದ್ದಿಗಳು ಹರಿದಾಡುತ್ತಿವೆ. ನನ್ನ ಬಗ್ಗೆ ನಿಜವಾಗಿ ಕಾಳಜಿ ಇರುವವರಿಗೆ, ನಾನು ಮತ್ತು ನನ್ನ ಕುಟುಂಬದವರು ಆರೋಗ್ಯವಾಗಿ, ಚೆನ್ನಾಗಿಯೇ ಇದ್ದೇವೆ ಎಂದು ತಿಳಿಸಲು ಬಯಸುತ್ತೇನೆ ಎಂದಿದ್ದಾರೆ.