Select Your Language

Notifications

webdunia
webdunia
webdunia
webdunia

ಲತಾ ಮಂಗೇಶ್ಕರ್ ಗಾಗಿ ಪ್ರಾರ್ಥಿಸಿ ಎಂದ ವೈದ್ಯರು: ಐಸಿಯುವಿನಲ್ಲೇ ಮುಂದುವರೆದ ಚಿಕಿತ್ಸೆ

ಲತಾ ಮಂಗೇಶ್ಕರ್
ಮುಂಬೈ: ಕೊರೋನಾ ಸೋಂಕಿನಿಂದಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯದ ಕುರಿತು ವೈದ್ಯರು ಲೇಟೆಸ್ಟ್ ಮಾಹಿತಿ ನೀಡಿದ್ದಾರೆ.

ಲತಾ ಮಂಗೇಶ್ಕರ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದೆ. ಅವರಿಗಾಗಿ ಪ್ರಾರ್ಥಿಸಿ ಎಂದು ವೈದ್ಯರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಇನ್ನು 92 ವರ್ಷ ವಯಸ್ಸಿನ ಲತಾ ಮಂಗೇಶ್ಕರ್ ಕಳೆದ ವಾರದಿಂದ ಐಸಿಯುವಿನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಹಾಗಿದ್ದರೂ ಇನ್ನೂ ಗುಣಮುಖರಾಗಿಲ್ಲ ಎನ್ನಲಾಗಿದೆ. ಇನ್ನು ಎಷ್ಟು ದಿನಗಳ ಕಾಲ ಐಸಿಯುವಿನಲ್ಲಿ ಮುಂದುವರಿಯಲಿದ್ದಾರೆ ಎನ್ನುವುದಕ್ಕೆ ವೈದ್ಯರು ಸರಿಯಾದ ಉತ್ತರ ನೀಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ ಸ್ಟಾಗ್ರಾಂನಲ್ಲಿ ಶಿಲ್ಪಾ ಶೆಟ್ಟಿಯನ್ನೂ ಫಾಲೋ ಮಾಡಲ್ಲ ರಾಜ್ ಕುಂದ್ರಾ