ಮುಂಬೈ: ಟೀಂ ಇಂಡಿಯಾ ಟೆಸ್ಟ್ ನಾಯಕತ್ವಕ್ಕೂ ವಿದಾಯ ಘೋಷಿಸುವ ಮೂಲಕ ವಿರಾಟ್ ಕೊಹ್ಲಿ ಈಗ ಎಲ್ಲಾ ಮಾದರಿಯ ಕ್ರಿಕೆಟ್ ನ ನಾಯಕತ್ವದಿಂದ ದೂರ ಸರಿದಿದ್ದಾರೆ. ಈ ನಡುವೆ ಪತ್ನಿ ಅನುಷ್ಕಾ ಶರ್ಮಾ ಪತಿಯ ಸಾಧನೆ ಬಗ್ಗೆ ಸುದೀರ್ಘ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
2014 ರಲ್ಲಿ ನಿಮ್ಮನ್ನು ನಾಯಕನಾಗಿ ನೇಮಿಸಿದ ದಿನ ನಾನು, ಎಂಎಸ್ ಮತ್ತು ನೀವು ಜೊತೆಯಾಗಿ ಕೂತು ಕಳೆದ ತಮಾಷೆಯ ಕ್ಷಣ ಈಗಲೂ ನೆನಪಿದೆ. ಅಂದಿನಿಂದ ಇಂದಿನವರೆಗೂ ಯಾವುದನ್ನೂ ನೀವು ಬಲವಂತವಾಗಿ ಹಿಡಿದುಕೊಟ್ಟಲಿಲ್ಲ. ಯಾವುದೇ ಸ್ಥಾನದ ಬಗ್ಗೆ ದುರಾಸೆ ಪಟ್ಟುಕೊಳ್ಳಲಿಲ್ಲ.
ಈ ಏಳು ವರ್ಷಗಳಲ್ಲಿ ನೀವು ಮಾಡಿದ ಸಾಧನೆಯನ್ನು ಒಬ್ಬ ತಂದೆಯಾಗಿ ನಿಮ್ಮಿಂದ ನಮ್ಮ ಮಗಳು ಕಲಿಯುತ್ತಾಳೆ. ನಾಯಕನಾಗಿ ನೀವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದೀರಿ ಎಂದು ಅನುಷ್ಕಾ ಪತಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.