Publish Date: Sat, 17 Jan 2026 (16:33 IST)
Updated Date: Sat, 17 Jan 2026 (16:35 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಗಿಲ್ಲಿ ನಟ ಗೆಲ್ಲಲಿ ಎಂದು ಅವರ ಅಭಿಮಾನಿಗಳು ಏನೇನು ಮಾಡ್ತಿದ್ದಾರೆ ಎಂದು ನೋಡಿದರೆ ಶಾಕ್ ಆಗ್ತೀರಿ.
ಬಿಗ್ ಬಾಸ್ ಕನ್ನಡ ಸೀಸನ್ 12 ಫೈನಲ್ ಹಂತಕ್ಕೆ ಬಂದಿದೆ. ವಿಶೇಷವಾಗಿ ಈಗ ಗಿಲ್ಲಿ ನಟ ಮತ್ತು ಕನ್ನಡ ಪರ ಹೋರಾಟಗಾರ್ತಿ, ನಟಿ ಅಶ್ವಿನಿ ಗೌಡ ನಡುವೆ ಜಿದ್ದಾ ಜಿದ್ದಿನ ಫೈಟ್ ಇದೆ. ಇಬ್ಬರಲ್ಲಿ ಯಾರು ಗೆಲ್ಲಬಹುದು ಎಂಬುದೇ ಅಭಿಮಾನಿಗಳ ಕುತೂಹಲ.
ಗಿಲ್ಲಿ ನಟ ಗೆಲ್ಲಬೇಕು ಎಂದು ಸ್ವತಃ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೇ ಹೇಳಿದ್ದಾರೆ. ಇದೀಗ ಮಂಡ್ಯದಾದ್ಯಂತ ಗಿಲ್ಲಿ ನಟನ ಗೆಲುವಿಗಾಗಿ ಪ್ರಾರ್ಥನೆಯೇ ನಡೆಯುತ್ತಿದೆ. ಅವರ ತವರಿನಲ್ಲಿ ದೇವರಿಗೆ ಪೂಜೆ ಸಲ್ಲಿಸಲಾಗುತ್ತಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗಿಲ್ಲಿ ನಟನ ಅಭಿಮಾನಿಗಳು ಮಧುಗಿರಿಯಲ್ಲಿ ಅನಾಥಾಶ್ರಮಕ್ಕೆ ದವಸ ಧಾನ್ಯ ಕೊಟ್ಟು ಪ್ರಾರ್ಥನೆ ಮಾಡಿದ್ದಾರೆ. ಇನ್ನು ಅಲ್ಲಲ್ಲಿ ಕಟೌಟ್ ಹಾಕಿ ಗಿಲ್ಲಿ ನಟನಿಗೆ ವೋಟ್ ಹಾಕಿ ಎಂದು ಕೇಳಿಕೊಳ್ಳುತ್ತಿರುವವರಿಗೇನೂ ಕೊರತೆಯಿಲ್ಲ. ಒಟ್ಟಿನಲ್ಲಿ ಗಿಲ್ಲಿ ನಟ ಬಿಗ್ ಬಾಸ್ ಗೆಲ್ಲುತ್ತಾರೋ ಇಲ್ವೋ ಆದರೆ ಜನರ ಮನಸ್ಸನ್ನಂತೂ ಗೆದ್ದೇ ಬಿಟ್ಟಿದ್ದಾನೆ.