ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಇಂದಿನ ಪ್ರೋಮೋದಲ್ಲಿ ರಕ್ಷಿತಾ ಜೊತೆ ಅಶ್ವಿನಿ ಗೌಡ ಮತ್ತು ಜಾನ್ವಿ ಕಾದಾಟಕ್ಕಿಳಿದಿದ್ದು ಈಡಿಯೆಟ್ ಎಂದೆಲ್ಲಾ ಬೈದಿದ್ದಾರೆ. ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಕಿಚ್ಚ ಸುದೀಪ್ ಇವರದ್ದೆಲ್ಲಾ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎಂದಿದ್ದಾರೆ.
ಗೆಜ್ಜೆ ಕಟ್ಟಿಕೊಂಡು ರಾತ್ರಿಯೆಲ್ಲಾ ಸೌಂಡ್ ಮಾಡಿ ಪ್ರಾಂಕ್ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಿತಾ, ಅಶ್ವಿನಿ ಗೌಡ ಮತ್ತು ಜಾನ್ವಿ ನಡುವೆ ಕಲಹ ತಾರಕಕ್ಕೇರುತ್ತದೆ. ಚೈಲ್ಡ್ ಅಂತ ಅಂದುಕೊಂಡಿದ್ದೀಯಾ ನನಗೇನು ಮೆಚ್ಯುರಿಟಿ ಇಲ್ವಾ ಎಂದು ಜಾನ್ವಿ ಕೇಳುತ್ತಾರೆ. ಇದಕ್ಕೆ ರಕ್ಷಿತಾ ಹೌದು ನೀವು ಚೈಲ್ಡೇ ಎಂದಿದ್ದಾರೆ.
ಗೆಜ್ಜೆ ಸದ್ದು ಯಾಕೆ ಮಾಡ್ತೀರಾ ಎಂದು ರಕ್ಷಿತಾ ಕೇಳಿದ್ದಾರೆ. ಇದಕ್ಕೆ ಮಲಗಿದ್ದ ಅಶ್ವಿನಿ ಎದ್ದು ಎಷ್ಟೇ ಮಾತಾಡ್ತೀಯಾ ಈಡಿಯೆಟ್ ಎನ್ನುತ್ತಾರೆ. ನೀನು ಎಲ್ಲಿಂದ ಬಂದಿದ್ದೀಯಾ ಎಂದು ನನಗೆ ಗೊತ್ತಿದೆ. ಮುಚ್ಕೊಂಡು ಮಲಕ್ಕೊ. ನಿನ್ನ ಡ್ರಾಮಾ ಎಲ್ಲಾ ಬಾತ್ ರೂಂನಲ್ಲಿ ಮಾಡ್ಕೋ ಎಂದು ಕಿತ್ತಾಡುತ್ತಾರೆ.
ಇದಕ್ಕೆ ವೀಕ್ಷಕರು ಕಾಮೆಂಟ್ ಮಾಡಿದ್ದು, ಅಶ್ವಿನಿ ಗೌಡದ್ದು ಅತಿಯಾಯಿತು. ರಕ್ಷಿತಾಳನ್ನು ಪರ್ಸನಲ್ ಟಾರ್ಗೆಟ್ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಕಿಚ್ಚ ಸುದೀಪ್ ಈ ವಾರ ನಟ್ಟು ಬೋಲ್ಟ್ ಟೈಟ್ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ.