ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ವಿವಾದಗಳ ಮತ್ತೆ ಪುನರಾರಂಭಗೊಂಡಿದೆ. ಆದರೆ ಸರ್ಕಾರ ಬಿಟ್ಟರೂ ನಾವು ಬಿಡಲ್ಲ ಎಂದು ಕನ್ನಡ ಪರ ಹೋರಾಟಗಾರರು ಗೇಟ್ ಏರಿ ಹೋರಾಟಕ್ಕಿಳಿದಿದ್ದಾರೆ.
ಬಿಗ್ ಬಾಸ್ ಶೂಟಿಂಗ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ನಲ್ಲಿ ಪರಿಸರ ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ಬೀಗ ಜಡಿಯಲಾಗಿತ್ತು. ಇದರಿಂದ ಬಿಗ್ ಬಾಸ್ ಶೋ ಅರ್ಧಕ್ಕೇ ನಿಂತಿತ್ತು. ಆದರೆ ಈ ವಿಚಾರ ವಿವಾದವಾಗುತ್ತಿದ್ದಂತೇ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಮಧ್ಯಪ್ರವೇಶಿಸಿ ಮತ್ತೆ ಬಿಗ್ ಬಾಸ್ ತೆರೆಯುವಂತೆ ಮಾಡಿದ್ದರು.
ಆದರೂ ಕನ್ನಡ ಪರ ಹೋರಾಟಗಾರರು ಮಾತ್ರ ಹೋರಾಟ ಬಿಟ್ಟಿಲ್ಲ. ನಿನ್ನೆಯೂ ಬಿಗ್ ಬಾಸ್ ಮನೆ ಮುಂದೆ ಧಿಕ್ಕಾರ ಘೋಷಣೆ ಹಾಕುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದರು.
ಇವರ ಪ್ರತಿಭಟನೆ ಯಾವ ಪರಿ ಇತ್ತೆಂದರೆ ಕೆಲವು ಮಹಿಳೆಯರು ಆಳೆತ್ತರದ ಗೇಟ್ ಏರಿ ಒಳಗೆ ಹಾರಲು ಯತ್ನಿಸುತ್ತಿದ್ದರು. ಸರ್ಕಾರ ಬಿಟ್ಟರೂ ನಾವು ಬಿಡಲ್ಲ ಎಂದು ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.