ಬೆಂಗಳೂರು: ಛಲವಾದಿ ನಾರಾಯಣಸ್ವಾಮಿ ಬಾಯಿ ಬಿಟ್ರೆ ಏನೇನೋ ಮಾತಾಡ್ತಾರೆ. ಅವರೊಬ್ಬ ಅಪ್ರಬುದ್ಧ ವಿರೋಧ ಪಕ್ಷದ ನಾಯಕ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಪ್ರದೀಪ್ ಈಶ್ವರ್, ಬಿಗ್ ಬಾಸ್ ಬಂದ್ ಮಾಡಿಸಿದ್ದು ಕಿಚ್ಚ ಸುದೀಪ್ ಅವರ ಮೇಲಿನ ಧ್ವೇಷದಿಂದ. ಇದನ್ನೆಲ್ಲಾ ಡಿಕೆ ಶಿವಕುಮಾರ್ ಅವರೇ ಮಾಡಿಸಿದ್ದಾರೆ ಎಂದಿದ್ದ ಛಲವಾದಿ ನಾರಾಯಣಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ನಾವು ಯಾಕೆ ಕಿಚ್ಚ ಸುದೀಪ್ ಅವರನ್ನು ಟಾರ್ಗೆಟ್ ಮಾಡೋಣ. ನಮಗೆ ಸುದೀಪ್ ಅವರ ಮೇಲೆ ಬಿಜೆಪಿಯವರಿಗಿಂತಲೂ ಹೆಚ್ಚು ಗೌರವವಿದೆ. ಏನೋ ಸಂವಹನ ಕೊರತೆಯಿಂದ ಬಿಗ್ ಬಾಸ್ ಬಂದ್ ಆಗಿತ್ತು. ಅದನ್ನು ಡಿಕೆ ಸಾಹೇಬ್ರು ಸರಿ ಮಾಡಿದ್ದಾರೆ ಎಂದಿದ್ದಾರೆ.
ಛಲವಾದಿ ಅವರೇ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ಎಲ್ಲಿಗೆ ಹೋಗಿದ್ರು. ಛಲವಾದಿ ಬಾಯಿಗೆ ಬಂದಂತೆ ಮಾತನಾಡ್ತಾರೆ. ಕನ್ನಡ ಚಿತ್ರರಂಗದ ಪರವಾಗಿ ನಮ್ಮ ಸರ್ಕಾರವೂ ಇದೆ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದಿದ್ದಾರೆ.