Select Your Language

Notifications

webdunia
webdunia
webdunia
webdunia

ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರದಂತೆ ನೋಡಿಕೊಳ್ಳಿ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy

Krishnaveni K

ಬೆಂಗಳೂರು , ಬುಧವಾರ, 8 ಅಕ್ಟೋಬರ್ 2025 (16:35 IST)
ಬೆಂಗಳೂರು: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ಔಷಧಿಗಳ ಕೊರತೆ ಎದ್ದು ಕಾಣದಂತೆ ರಾಜ್ಯ ಸರಕಾರ ನೋಡಿಕೊಳ್ಳಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
 
ಕೆಲವು ದೂರು ಬಂದ ಕಾರಣ ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಕೊಟ್ಟ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿzರು. ಸುಮಾರು 75 ರಷ್ಟು ಔಷಧಗಳು ಇಲ್ಲಿ ಸಿಗುತ್ತವೆ. ಉಳಿದವನ್ನು ಸರಕಾರ ಒದಗಿಸಬೇಕಿದೆ ಎಂದು ನುಡಿದರು. ಬಡವರಿಗೆ ಔಷಧಿ ಅಂಗಡಿಗಳಲ್ಲಿ ಹೋಗಿ ಕೊಳ್ಳುವ ಶಕ್ತಿ ಇರುವುದಿಲ್ಲ; ಇದನ್ನು ಸರಕಾರ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಒತ್ತಾಯಿಸಿದರು.
 
ವೈದ್ಯರ ಕೆಲವು ಕೊರತೆಗಳೂ ಎದ್ದು ಕಾಣುತ್ತವೆ ಎಂದು ತಿಳಿಸಿದ ಅವರು, ಅವರನ್ನು ಕೇಳಿದ್ದೇನೆ. ಕೆಲವು ಭಾಗಗಳಲ್ಲಿ ಹಿರಿಯ ವೈದ್ಯರು ರೋಗಿಗಳನ್ನು ಸರಿಯಾಗಿ ನೋಡುವುದಿಲ್ಲ ಎಂಬ ದೂರುಗಳಿತ್ತು. ನಮ್ಮ ಮುತುವರ್ಜಿಯಲ್ಲೇ ಎಲ್ಲವೂ ನಡೆಯುತ್ತದೆ. ಎಂಬಿಬಿಎಸ್ ತರಬೇತಿಗೆ ಬಂದವರಿಗೆ ಪಾಠ ಹೇಳುವಾಗ ಜೊತೆಯಲ್ಲಿ ಇಟ್ಟುಕೊಳ್ಳುತ್ತೇವೆ. ನಾವೇ ಚಿಕಿತ್ಸೆ ಕೊಡುತ್ತೇವೆ ಎಂದಿದ್ದಾಗಿ ವಿವರಿಸಿದರು.
 
ತುಂಬ ಹಿರಿಯ ವೈದ್ಯರು ಕೆಲವೊಮ್ಮೆ ಇಲ್ಲಿಂದ ಬೇರೆ ಬೇರೆ ಆಸ್ಪತ್ರೆಗೆ ಹೊರಟು ಹೋಗುತ್ತಾರೆ. ಇದನ್ನು ಸರಕಾರ ತಡೆಯಬೇಕಿದೆ. ಇಲ್ಲಿ ಬರುವ ಅನಾರೋಗ್ಯಪೀಡಿತರನ್ನು ಕಾಪಾಡುವುದು ಹಿರಿಯ ವೈದ್ಯರ ಕರ್ತವ್ಯ. ಅವರನ್ನು ಹೊರಗಡೆ ಹೋಗಲು ಬಿಡಬಾರದು ಎಂದು ತಿಳಿಸಿದರು. ವೈದ್ಯರ ಕೊರತೆ ಆಗದಂತೆ ಸರಕಾರ ನೋಡಿಕೊಳ್ಳಬೇಕು; ನರ್ಸ್ ಮತ್ತಿತರ ಸಿಬ್ಬಂದಿ ಕೊರತೆ ಇದ್ದು ಅದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
 
ಕೆಲವು ಸಂದರ್ಭಗಳಲ್ಲಿ ಸ್ವಚ್ಛತೆಯ ಕೊರತೆ ಇದೆ. ಆ ಕಡೆ ಗಮನ ಕೊಡಬೇಕು ಎಂದು ಹೇಳಿದರು. ಶುಶ್ರೂಷೆ ಕೊಡುವ ಜಾಗದಲ್ಲಿ ಸ್ವಚ್ಛತೆಯ ಕೊರತೆಯಿಂದ ರೋಗ ರುಜಿನಗಳು ಹರಡುವ ಹಾಗೆ ಆಗಬಾರದು ಎಂದು ತಿಳಿಸಿದರು.
 
ಬಿಗ್ ಬಾಸ್ ಕಾರ್ಯಕ್ರಮದ ಮನೆಗೆ ಬೀಗ ಹಾಕಿದ ಕುರಿತಂತೆ ಮಾಧ್ಯಮಗಳು ಗಮನ ಸೆಳೆದಾಗ, ಇದೇನು ಫ್ಯಾಕ್ಟರಿಯೇ? ಮಾಲಿನ್ಯ ನಿಯಂತ್ರಣ ಮಂಡಳಿಗೂ ಇದಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ಇಲ್ಲಿ ಅನಾರೋಗ್ಯಕರ ಹೊಗೆ ಸೂಸುವ ಕೆಲಸ ನಡೆದಿದೆಯೇ? ಅಂಥ ಫ್ಯಾಕ್ಟರಿಗಳನ್ನು ಇವರು ಮುಚ್ಚಿಲ್ಲ; ಅಲ್ಲಿ ಮಾತ್ರ ಹೊಂದಾಣಿಕೆ. ಇಲ್ಲೇನಿದೆ? ಇದು ಒಂದು ಮನೆಯ ಚಟುವಟಿಕೆ. ಇನ್ನು ಮುಂದೆ ಮನೆ ಮನೆಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸರ್ಟಿಫಿಕೇಟ್ ಬೇಕೇ ಎಂದು ಕೇಳಿದರು. 
ಈ ಮೂಲಕ ಸರಕಾರವು ಸುದೀಪ್ ಅವರನ್ನು ಟಾರ್ಗೆಟ್ ಮಾಡಿದೆ. ರಾಜಣ್ಣ, ನಾಗೇಂದ್ರ ಅವರನ್ನು ಟಾರ್ಗೆಟ್ ಮಾಡಿ ಆಗಿದೆ. ಈಗ ಸುದೀಪ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಎಂದರೆ ಯಾರನ್ನು ಗುರಿ ಮಾಡಿದ್ದಾರೆಂದು ತಿಳಿದುಕೊಳ್ಳಿ ಎಂದು ತಿಳಿಸಿದರು. ಇದು ಜನಾಂಗೀಯ ಟಾರ್ಗೆಟ್ ಆಗುತ್ತದೆ.
ಎಚ್ಚರದಿಂದ ಇರುವುದು ಒಳ್ಳೆಯದು; ಜನ ಇದನ್ನು ಸಹಿಸುವುದಿಲ್ಲ; ನಟ್ ಬೋಲ್ಟ್ ನೀವು ಯಾರಿಗೆ ಟೈಟ್ ಮಾಡಲು ಹೊರಟಿದ್ದೀರೋ ಅವರೆಲ್ಲ ಸೇರಿ ಸರಕಾರದ ನಟ್ ಮತ್ತು ಬೋಲ್ಟ್ ಟೈಟ್ ಮಾಡುವ ಕಾಲ ಹತ್ತಿರ ಬಂದಿದೆ ಎಂದು ತಿಳಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಸಮೀಕ್ಷೆಗಾಗಿ ಮಕ್ಕಳ ಭವಿಷ್ಯದ ಜತೆ ಆಟವಾಡ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ ಕಿಡಿ