ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ಯಾಕೋ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಈ ಬಾರಿ ಮತ್ತೊಬ್ಬ ಸ್ಪರ್ಧಿಯಿಂದ ಹಲ್ಲೆ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ಒಬ್ಬರು ಔಟ್ ಆಗಿದ್ದಾರೆ ಎಂಬ ಸುದ್ದಿಯೂ ಇದೆ. ಏನಾಗಿದೆ ನೋಡಿ.
ಬಿಗ್ ಬಾಸ್ ಕನ್ನಡ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿರುವ ರಜತ್ ಆರಂಭದಿಂದಲೂ ಆಕ್ರಮಣಕಾರೀ ವರ್ತನೆ ತೋರುತ್ತಲೇ ಇದ್ದಾರೆ. ಈ ವಾರ ರಜತ್ ಮತ್ತು ಧನರಾಜ್ ನಡುವೆ ವಾರದ ನಡುವೆ ಜಗಳವಾಗಿತ್ತು. ಇದೀಗ ಮತ್ತೊಮ್ಮೆ ಕಳಪೆ, ಉತ್ತಮ ಕೊಡುವಾಗ ಇಬ್ಬರ ನಡುವೆ ಜಗಳವಾಗಿದೆ.
ರಜತ್ ಗೆ ಧನರಾಜ್ ಕಳಪೆ ನೀಡಿದ್ದು ಇದಕ್ಕೆ ಅವರು ನೀಡಿದ ಕಾರಣಗಳನ್ನು ಕೇಳಿ ರಜತ್ ರೊಚ್ಚಿಗೆದ್ದಿದ್ದಾರೆ. ನಾನು ನಿನ್ನೆ ಹುಟ್ಟಿ ಈವತ್ತು ಬಿಗ್ ಬಾಸ್ ಗೆ ಬಂದಿಲ್ಲ ಕಣೋ. ನನಗೆ ಹತ್ತಿದ್ದಿದ್ದಕ್ಕೆ ನಿನ್ನ ಮುಖ, ಮೂತಿ ಹೊಡೆದು ಹಾಕ್ಬೇಕಿತ್ತು ಎಂದು ಆವಾಜ್ ಹಾಕಿದ್ದಾರೆ. ಇದಕ್ಕೆ ಧನರಾಜ್ ಕೂಡಾ ತಾಕತ್ತಿದ್ದರೆ ಹೊಡಿರೀ ನೋಡೋಣ ಅಂತಾರೆ.
ಆಗ ರಜತ್ ಕೋಪಗೊಂಡು ನೇರವಾಗಿ ಹೊಡೆಯಲೇ ಹೋಗುತ್ತಾರೆ. ಆಗ ಮನೆಯವರೆಲ್ಲಾ ಓಡಿ ರಜತ್ ಬೇಡ ಎಂದು ತಡೆಯಲು ಹೋಗುತ್ತಾರೆ. ಈ ಪ್ರೋಮೋವನ್ನು ಕಲರ್ಸ್ ವಾಹಿನಿ ಹಂಚಿಕೊಂಡಿದ್ದು ನಿಜವಾಗಿಯೂ ರಜತ್ ಹೊಡೆದಿದ್ದಾರಾ, ಈ ಕಾರಣಕ್ಕೆ ಅವರನ್ನು ಹೊರಹಾಕಿದ್ದಾರಾ ಎನ್ನುವುದು ಇಂದಿನ ಎಪಿಸೋಡ್ ನಲ್ಲಿ ಸ್ಪಷ್ಟವಾಗಲಿದೆ.