Publish Date: Tue, 12 May 2020 (09:57 IST)
Updated Date: Tue, 12 May 2020 (10:02 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ-ಪ್ರಿಯಾಂಕ ದಂಪತಿ ಪುತ್ರ ಆಯುಷ್ ಗೆ ಇಂದು ಜನ್ಮ ದಿನದ ಸಂಭ್ರಮ. ಪುತ್ರನ ಜನ್ಮದಿನದ ಪ್ರಯುಕ್ತ ಇಬ್ಬರೂ ತಮ್ಮ ಪುತ್ರನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಿಶ್ ಮಾಡಿದ್ದಾರೆ.
ಉಪೇಂದ್ರ ಪುತ್ರ ಆಯುಷ್ ಈಗ ಹರೆಯಕ್ಕೆ ಬಂದ ಕ್ಯೂಟ್ ಹುಡುಗ. ಈ ಕುಡಿ ಮೀಸೆಯ ಹುಡುಗನ ನೋಡಿ ಅಭಿಮಾನಿಗಳು ನೀನು ಖಂಡಿತಾ ಫ್ಯೂಚರ್ ಸ್ಟಾರ್ ಆಗ್ತೀಯಾ ಎಂದು ಹಾರೈಸಿದ್ದಾರೆ.
ಉಪೇಂದ್ರ ಪುತ್ರಿ ಐಶ್ವರ್ಯಾ ಈಗಾಗಲೇ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಆಯುಷ್ ಇನ್ನೂ ಚಿತ್ರರಂಗಕ್ಕೆ ಕಾಲಿಡಬೇಕಷ್ಟೇ. ಮುಂದೊಂದು ದಿನ ಆತನೂ ಸ್ಟಾರ್ ಆಗಿ ಮೆರೆಯುವ ಸಾಧ‍್ಯತೆ ಇಲ್ಲದಿಲ್ಲ.