Select Your Language

Notifications

webdunia
webdunia
webdunia
webdunia

ಸಚಿವ ಭೈರತಿ ಬಸವರಾಜು ಕಾರ್ಯಕ್ರಮದಲ್ಲಿ ನಡೆದ ಎಡವಟ್ಟು ಸಮರ್ಥಿಸಿಕೊಂಡ ನಟ ಜಗ್ಗೇಶ್

ಸಚಿವ ಭೈರತಿ ಬಸವರಾಜು ಕಾರ್ಯಕ್ರಮದಲ್ಲಿ ನಡೆದ ಎಡವಟ್ಟು ಸಮರ್ಥಿಸಿಕೊಂಡ ನಟ ಜಗ್ಗೇಶ್
ಬೆಂಗಳೂರು , ಸೋಮವಾರ, 11 ಮೇ 2020 (09:00 IST)
ಬೆಂಗಳೂರು: ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಸಾಮಾಜಿಕ ಅಂತರ ಮರೆತು ದಿನಸಿಗಾಗಿ ನೂಕು ನುಗ್ಗಲು ನಡೆಸಿದ ಘಟನೆಯನ್ನು ನಟ, ಬಿಜೆಪಿ ನಾಯಕ ಜಗ್ಗೇಶ್ ಸಮರ್ಥಿಸಿಕೊಂಡಿದ್ದಾರೆ.


ಕೊರೋನಾ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವಾಗ ರಾಜ್ಯ ಸರ್ಕಾರದ ಸಚಿವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲೇ ಇಂತಹ ಎಡವಟ್ಟು ಆಗಿರುವುದಕ್ಕೆ ಹಲವರು ಟೀಕಾ ಪ್ರಹಾರ ನಡೆಸಿದ್ದರು. ಜನರು ನೂಕು ನುಗ್ಗಲು ನಡೆಸಿದ್ದಲ್ಲದೆ, ಕೆಲವರು ಸುರಕ್ಷಿತಾ ಸಾಧನವನ್ನೂ ಧರಿಸಿರಲಿಲ್ಲ. ಇಂತಹ ಘಟನೆಗಳು ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆ.

ಈ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಜಗ್ಗೇಶ್, ಪಾಪ, ಇದು ಅಶಿಸ್ತಲ್ಲ. ಬದಲಾಗಿ ಹಸಿವು. ಹಾಳಾದ್ದು ಕೊರೋನಾ ವಿಶ್ವದ ನೆಮ್ಮದಿಗೆಡಿಸಿದೆ. ಈ ದೃಶ್ಯ ನೋಡಿ ಸಂಕಟವಾಯಿತು. ಕ್ರೂರ ಧನದಾಹಿ ಚೈನ ದೇಶಕ್ಕೆ ಕ್ಷಮೆ ಕೂಡಾ ಇರಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀರಿನಿಂದ ತಯಾರಿಸಿದ ಈ ಮನೆಮದ್ದುಗಳನ್ನು ಒಮ್ಮೆ ಉಪಯೋಗಿಸಿ ನೋಡಿ