Publish Date: Sat, 09 May 2020 (10:25 IST)
Updated Date: Sat, 09 May 2020 (10:27 IST)
ಮಂಡ್ಯ: ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರ ಮಾಡುವಾಗ ಮಂಡ್ಯದಲ್ಲಿ ದರ್ಶನ್ ಪ್ರೀತಿಯಿಂದ ಎತ್ತೊಂದರ ತಲೆ ನೇವರಿಸಿದ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಆ ಬಸವನ ಚಿಕಿತ್ಸೆಗೆ ಈಗ ದರ್ಶನ್ ವೈದ್ಯರ ತಂಡವನ್ನೇ ಕಳುಹಿಸಿ ಸುದ್ದಿಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯಪೀಡಿತವಾಗಿದ್ದ ಬಸವನಿಗೆ ದರ್ಶನ್ ಪಶುವೈದ್ಯರನ್ನು ಕಳುಹಿಸಿ ಬೇಕಾದ ಚಿಕಿತ್ಸೆ ಕೊಡಿಸಿದ್ದಾರೆ.
ಲಾಕ್ ಡೌನ್ ಇರುವ ಕಾರಣ, ನೇರವಾಗಿ ಬಸವನ ಬಳಿಗೆ ಹೋಗಲು ಸಾಧ್ಯವಾಗದೇ ಇದ್ದರೂ ವೈದ್ಯರನ್ನು ಕಳುಹಿಸಿ ತಮ್ಮ ಪ್ರಾಣಿ ಪ್ರೀತಿಯನ್ನು ಮತ್ತೆ ಸಾಬೀತುಪಡಿಸಿದ ದರ್ಶನ್ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.