Publish Date: Mon, 11 May 2020 (08:56 IST)
Updated Date: Mon, 11 May 2020 (08:57 IST)
ಬೆಂಗಳೂರು: ನಟ ಲೂಸ್ ಮಾದ ಯೋಗಿ ಒಂದು ಒಳ್ಳೆಯ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಇದೀಗ ವಿನೋದ್ ಪ್ರಭಾಕರ್ ಜತೆ ಸಿನಿಮಾ ಮಾಡುವ ಸುದ್ದಿ ಬಂದಿದೆ.
ವಿಶೇಷವೆಂದರೆ ಯೋಗಿ ಈ ಸಿನಿಮಾದ ಮೂಲಕ ನಿರ್ಮಾಪಕರಾಗುತ್ತಿದ್ದಾರಂತೆ. ವಿನೋದ್ ಪ್ರಭಾಕರ್ ಜತೆಗೆ ಯೋಗಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ಈ ಮೊದಲು ಯೋಗಿ ಬೇರೆ ಹೀರೋಗಳ ಜತೆ ತೆರೆ ಹಂಚಿಕೊಂಡಾಗಲೆಲ್ಲಾ ಯಶಸ್ಸು ಕಂಡಿದ್ದರು. ಈಗ ಮತ್ತೊಂದು ಯಶಸ್ಸಿಗಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಯೋಗಿ.