Select Your Language

Notifications

webdunia
webdunia
webdunia
webdunia

ಶೂಟಿಂಗ್ ಹೊರತುಪಡಿಸಿ ಉಳಿದ ಸಿನಿಮಾ ಕೆಲಸಗಳಿಗೆ ಸರ್ಕಾರದ ಒಪ್ಪಿಗೆ

ಕೊರೋನಾ ವೈರಸ್
ಬೆಂಗಳೂರು , ಸೋಮವಾರ, 11 ಮೇ 2020 (09:21 IST)
ಬೆಂಗಳೂರು: ಕರ್ನಾಟಕ ವಾಣಿಜ್ಯ ಮಂಡಳಿ ಮನವಿ ಮೇರೆಗೆ ಶೂಟಿಂಗ್ ಹೊರತುಪಡಿಸಿ ಉಳಿದ ಕೆಲಸಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.


ಈಗಾಗಲೇ ಧಾರವಾಹಿ ಶೂಟಿಂಗ್ ಗೆ ಅನುಮತಿ ನೀಡಿದ್ದ ಸರ್ಕಾರ ಇದೀಗ ಸಿನಿಮಾ ರಂಗದಲ್ಲೂ ತೆರೆಮರೆಯ ಕೆಲಸಗಳಿಗೆ ಒಪ್ಪಿಗೆ ನೀಡಿದೆ. ಸಾವಿರಾರು ಕಾರ್ಮಿಕರ ಹಿತ ಗಮನದಲ್ಲಿಟ್ಟುಕೊಂಡು ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಕೇವಲ 8 ಜನರನ್ನಿಟ್ಟುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.

ಇದರಿಂದಾಗಿ ಡಬ್ಬಿಂಗ್, ಸಂಗೀತ ಸಂಯೋಜನೆ, ಗ್ರಾಫಿಕ್ಸ್ ಅಳವಡಿಕೆ ಇತ್ಯಾದಿ ತೆರೆ ಹಿಂದಿನ ಚಟುವಟಿಕೆಗಳು ನಡೆಯಲಿವೆ. ಹಲವು ಸಿನಿಮಾಗಳು ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಗಾಗಿ ಕಾದು ಕುಳಿತಿದ್ದು, ಸರ್ಕಾರ ನಿರ್ಧಾರದಿಂದ ಹಲವು ಸಿನಿಮಾಗಳಿಗೆ ಪ್ರಯೋಜನವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿನೋದ್ ಪ್ರಭಾಕರ್ ಜತೆ ಲೂಸ್ ಮಾದ ಯೋಗಿ ಹೊಸ ಸಿನಿಮಾ