ತುಳಸಿದಳದಂತಹ ಉತ್ತಮ ಚಿತ್ರವನ್ನು ಕನ್ನಡ ಚಿತ್ರರಂಗಕ್ಕೆ
ನೀಡಿರುವ ವೇಮಗಲ್ ಜಗನ್ನಾಥರಾವ್ ನಿರ್ದೇಶನದ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ ಚಿತ್ರ "ಆವರ್ತ". ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಮಡಿಕೇರಿ, ಉಡುಪಿ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರದ ನಾಯಕನಾಗಿ ಧನ್ವಿತ್ ಎಂಬ ಯುವ ಕಲಾವಿದ ನಟಿಸಿದ್ದಾರೆ. ಕನಕಪುರದಲ್ಲಿ ಹುಟ್ಟಿ ಬೆಳೆದು ಚಿಕ್ಕಂದಿನಿಂದಲೂ ಅಭಿನಯ ಕಲೆಯಲ್ಲಿ ಆಸಕ್ತಿ ಹೊಂದಿದ್ದ, ಲಕ್ಷ್ಮಿಕಾಂತ ಗೌಡ ಈಗ ಧನ್ವಿತ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ರೈತರ ಮಗನಾಗಿ ಬೆಳೆದು, ಇಂದಿನ ಚಿತ್ರರಂಗಕ್ಕೆ ಬೇಕಾದ ಅಭಿನಯ ಕಲೆ ಬೆಳೆಸಿಕೊಂಡು ತನ್ನ ಪ್ರಥಮ ಪಾದಾರ್ಪಣೆ ಯಲ್ಲೆ ಕನ್ನಡ ಚಲನ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸುವುದು ಆತನ ಅದೃಷ್ಟವೇ ಸರಿ,
ಧನ್ವಿತ್ ನದು ವಿಶಿಷ್ಟ ರೀತಿಯ ನೈಜ ಅಭಿನಯ, ಪ್ರಥಮ ಪರೀಕ್ಷೆಯಲ್ಲಿ ಹಿರಿಯ ನಿರ್ದೇಶಕರಾದ ವೇಮಗಲ್ ಜಗನ್ನಾಥರಾವ್ ನವರಿಗೆ ಇಷ್ಟವಾಗಿ ತಾವು ನಿರ್ದೇಶನ ಮಾಡುತ್ತಿರುವ "ಆವರ್ತ" ಎಂಬ ವಿಭಿನ್ನ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ನಾಯಕನಾಗಿ ಆಯ್ಕೆಯಾದದ್ದು ಎಲ್ಲಾ ರೀತಿಯ ಪರೀಕ್ಷೆಗಳಲ್ಲೂ ಗೆದ್ದಿದ್ದೆ ಧನ್ವಿತನ ವಿಶೇಷತೆ.
ಪ್ರತಿ ಕಾರ್ಯದಲ್ಲೂ ವಿಶೇಷ ಆಸಕ್ತಿ ಸಾಹಸ ವಾಗಲಿ, ನೃತ್ಯ ವಾಗಲಿ, ಎಲ್ಲವನ್ನೂ ಮನಃಸ್ಪೂರ್ತಿಯಾಗಿ ಕಲಿತು, ಸಿಕ್ಕ ಕಡಿಮೆ ಅವಧಿಯಲ್ಲಿ ನಿರ್ದೇಶಕರಿಗೆ ಬೇಕಾದ ರೀತಿ ಕೆಲಸ ಮಾಡುವ ವಿನಯ ಹುಡುಗ ಧನ್ವಿತ್.
ಸಂಸಾರದ ಮೇಲೆ ಅಕ್ಕರೆ, ತಂದೆ-ತಾಯಿ ಮೇಲೆ ಪ್ರೀತಿ, ಸಾಕಷ್ಟು ಕೆಲಸದ ಬಿಜಿ ಎಲ್ಲೂ ತನ್ನ ನೆಚ್ಚಿನ ಅಭಿನಯ ಕಲೆಗಾಗಿ ಹಗಲಿರುಳು ದುಡಿಯುವ ಗಟ್ಟಿ ಮನಸ್ಸಿನ ಧನ್ವಿತ್ ಕನ್ನಡ ಚಿತ್ರರಂಗಕ್ಕೆ ಒಬ್ಬ ವಿಶಿಷ್ಟ ನಾಯಕನಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆವರ್ತ ಚಿತ್ರದಲ್ಲಿ ಇನ್ವೆಸ್ಟಿಗೇಟರ್ ಪಾತ್ರದಲ್ಲಿ ವಿಶೇಷವಾಗಿ ಅಭಿನಯಿಸಿರುವುದು ಅಲ್ಲದೆ, ಸಾಹಸ ದೃಶ್ಯಗಳಲ್ಲೂ ವಿಶೇಷವಾಗಿ ಮಿಂಚಿದ್ದಾರೆ. ಹಾಡಿನ ದೃಶ್ಯಗಳಲ್ಲೂ ಕೂಡ ನೈಜವಾಗಿ ಅಭಿನಯಿಸಿರುವ ಧನ್ವಿತ್ ಹೊಸಭ ಎಂದು ಅನ್ನಿಸುವುದೇ ಇಲ್ಲ ಎಂಬುದು ಆವರ್ತ ಚಿತ್ರತಂಡದ ಅಭಿಪ್ರಾಯ.
ಇದೇ ಇಪ್ಪತ್ತೈದನೇ ತಾರೀಖು ಧನ್ವಿತ್ ಅವರ ಹುಟ್ಟುಹಬ್ಬ. ಹುಟ್ಟುಹಬ್ಬದ ಸಂತೋಷದಲ್ಲಿ ರೈತರಿಗಾಗಿ, ಚಲನಚಿತ್ರರಂಗಕ್ಕೆ, ವಿಶೇಷ ರೀತಿಯಲ್ಲಿ ಸೇವೆ ಸಲ್ಲಿಸುವುದಾಗಿ ಪಣತೊಟ್ಟಿದ್ದಾರೆ.
ವಿಜೇತ ಚಿತ್ರ ನಿರ್ಮಿಸಿರುವ ಈ ಚಿತ್ರದಲ್ಲಿ ಥ್ರಿಲ್ಲರ್ ಮಂಜುರವರ ಸಾಹಸ, ಅತಿಶಯ ಜೈನ್ ರವರ ಸಂಗೀತ, ಮಲ್ಲಿಕಾರ್ಜುನ್ ಅವರ ಕ್ಯಾಮರಾ ಕೆಲಸದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ, ಎಸ್ ಶಿವರಾಂ, ಜಯಚಂದ್ರ, ಧನ್ವಿತ್, ನಯಾನ, ಮೇಘನಾ ಗೌಡ, ರಾಮರಾವ್ ಮುಂತಾದವರು ಅಭಿನಯಿಸಿದ್ದಾರೆ.