Select Your Language

Notifications

webdunia
webdunia
webdunia
webdunia

2022, ಏಪ್ರಿಲ್ 14ಕ್ಕೆ ಕೆಜಿಎಫ್-2 ಬಿಡುಗಡೆಗೆ ಮುಹೂರ್ತ ಫಿಕ್ಸ್!

2022, ಏಪ್ರಿಲ್ 14ಕ್ಕೆ ಕೆಜಿಎಫ್-2 ಬಿಡುಗಡೆಗೆ ಮುಹೂರ್ತ ಫಿಕ್ಸ್!
bengaluru , ಭಾನುವಾರ, 22 ಆಗಸ್ಟ್ 2021 (15:57 IST)
ಹಲವಾರು ಏರಿಳಿತಗಳ ನಡುವೆಯೂ ಭಾರೀ ಕುತೂಹಲ ಮೂಡಿಸಿರುವ ಕೆಜಿಎಫ್-2 2022 ಏಪ್ರಿಲ್ 14ರಂದು ಬಿಡುಗಡೆ ಆಗಿದೆ.
ನಟ ಯಶ್ ಟ್ವಿಟರ್ ನಲ್ಲಿ ಕೆಜಿಎಫ್-2 ಚಿತ್ರದ ಬಿ
ಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಕೆಜಿಎಫ್ ಮೊದಲ ಚಿತ್ರ ಗಡಿ ದಾಟಿ ದಾಖಲೆ ಬರೆದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡನೇ ಭಾಗದ ಚಿತ್ರಕ್ಕೆ ಭಾರೀ ಬೇಡಿಕೆ ಉಂಟಾಗಿದ್ದು, ಭಾರೀ ನಿರೀಕ್ಷೆ ಮೂಡಿಸಿತ್ತು.
ಕೆಜಿಎಫ್ 2 ಚಿತ್ರದಲ್ಲಿ ಬಾಲಿವುಡ್ ನಟರಾದ ಸಂಜಯ್ ದತ್ ಮತ್ತು ರವಿನಾ ಟಂಡನ್ ಸೇರಿದಂತೆ ಹಲವು ದಿಗ್ಗಜರು ನಟಿಸಿದ್ದು, ಚಿತ್ರೀಕರಣ ಮುಗಿದಿದೆ. ಆದರೆ ಕೊರೊನಾ ಅಬ್ಬರದ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ಪದೇಪದೆ ಮುಂದೂಡಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಭರವಸೆ ಮೂಡಿಸಿದ ಯುವ ನಟ ನಿರಂಜನ್ ಸುಧೀಂದ್ರ