Select Your Language

Notifications

webdunia
webdunia
webdunia
webdunia

ಆಟಕ್ಕುಂಟು ಲೆಕ್ಕಕ್ಕಿಲ್ಲ: ಅನಾವರಣಗೊಂಡಿರೋದು ಅದ್ಭುತ ಟ್ರೇಲರ್!

ಆಟಕ್ಕುಂಟು ಲೆಕ್ಕಕ್ಕಿಲ್ಲ: ಅನಾವರಣಗೊಂಡಿರೋದು ಅದ್ಭುತ ಟ್ರೇಲರ್!
ಬೆಂಗಳೂರು , ಶನಿವಾರ, 7 ಸೆಪ್ಟಂಬರ್ 2019 (16:56 IST)
ರಾಮ್ ಜೆ ಚಂದ್ರ ನಿರ್ದೇಶನದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ. ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸಾ ಆಲೋಚನೆ, ಕ್ರಿಯೇಟಿವಿಟಿಗಳ ಗಾಳಿ ಬಲವಾಗಿ ಬೀಸಲಾರಂಭಿಸಿದೆಯಲ್ಲಾ? ಆ ಅಲೆಯಲ್ಲಿಯೇ ಸಾಗಿಬಂದಂತೆ ಭಾಸವಾಗುತ್ತಿರೋ ಈ ಚಿತ್ರದ ಪ್ರಾಮಿಸಿಂಗ್ ಟ್ರೇಲರ್ ಇದೀಗ ಲಾಂಚ್ ಆಗಿದೆ. ಈ ಮೂಲಕ ಇದುವರೆಗೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಬಗ್ಗೆ ಮೂಡಿಕೊಂಡಿದ್ದ ಭರವಸೆ ಮತ್ತಷ್ಟು ತೀವ್ರವಾಗಿದೆ.
ನಿರ್ದೇಶಕರ ಪಾಲಿಗೆ ಇದು ಮೊದಲ ಅನುಭವ. ಅವರು ಸಾಕಷ್ಟು ವರ್ಷಗಲ ಕಾಲ ಕನಸು ಕಂಡು, ಥರ ಥರದಲ್ಲಿ ಅಧ್ಯಯನ ಮಾಡಿ, ವರ್ಷಾಂತರಗಳ ಕಾಲ ಫೀಲ್ಡ್ ವರ್ಕ್ ಮಾಡಿ ಈ ಸಿನಿಮಾದ ಕಥೆ ರೂಪಿಸಿರೋದರ ಬಗ್ಗೆ ಈ ಹಿಂದೆಯೇ ಹೇಳಿಕೊಂಡಿದ್ದರು. ಅಂಥಾ ಶ್ರದ್ಧೆಗಳೆಲ್ಲವೂ ಈ ಟ್ರೇಲರ್ ಮೂಲಕ ಪ್ರತಿಫಲಿಸಿವೆ. ಇದು ನವ ನಿರ್ದೇಶಕರಿಂದ ರೂಪಿಸಲ್ಪಟ್ಟಿರೋ ಸಿನಿಮಾ ಅಂದರೆ ನಂಬಲು ಕಷ್ಟವಾಗುವಷ್ಟು ಅಚ್ಚುಕಟ್ಟಾಗಿ ಇಡೀ ಚಿತ್ರ ಮೂಡಿ ಬಂದಿರೋ ಸುಳಿವೂ ಕೂಡಾ ಈ ಟ್ರೇಲರಿನಲ್ಲಿಯೇ ಸಿಕ್ಕಿದೆ.
 
ಈ ಚಿತ್ರದಲ್ಲಿ ಗೌತಮ್, ಭರತ್ ಸಾಗರ್, ಬೇಬಿ ಪ್ರಾಜ್ಞಾ . ಅಚ್ಯುತ್ ಕುಮಾರ್ ಮೂತಾದವರ ತಾರಾಗಣವಿದೆ. ಪರಮೇಶ್ ಸಿ ಎಂ ಛಾಯಾಗ್ರಹಣ, ನೊಬಿನ್ ಪೌಲ್ ಸಂಗೀತ ಈ ಚಿತ್ರಕ್ಕಿದೆ. ಒಟ್ಟಾರೆಯಾಗಿ ಇದು ಮಾಮೂಲಿ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಕಥೆ ಹೊಂದಿರೋ ಚಿತ್ರವಲ್ಲ, ಇದರಲ್ಲಿ ವಿಶೇಷವಾದುದೇನೋ ಇದೆ ಎಂಬ ನಂಬಿಕೆಯನ್ನು ಈ ಟ್ರೇಲರ್ ಬಲಗೊಳಿಸಿದೆ. ಸಂಚಾರಿ ವಿಜಯ್, ಮಯೂರಿ ಮತ್ತು ದುನಿಯಾ ರಶ್ಮಿಯ ಪಾತ್ರಗಳು ಮತ್ತು ಅವುಗಳ ಭಯಾನಕ ಚಹರೆಗಳೇ ಈ ಸಿನಿಮಾಗಾಗಿ ಜನ ತುದಿಗಾಲಲ್ಲಿ ನಿಲ್ಲುವಂತೆ ಮಾಡಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲೇ ಮಗು ಮಾಡಿಕೊಳ್ಳುವ ಯೋಚನೆಯಲ್ಲಿದ್ದಾರಂತೆ ಪ್ರಿಯಾಂಕಾ ಚೋಪ್ರಾ!